200 ಅಡಿ ಉದ್ದ ಇದ್ದ ಪೈಪ್ ಲೈನ್ ನಲ್ಲಿ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ ಕೊಂಕಾಣಿದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಸಿಂಗ್ರಿಬೋವಿದೊಡ್ಡಿ ಗ್ರಾಮದ ರೈತ ರಾಜಣ್ಣ ತನ್ನ ಜಮೀನಿನಲ್ಲಿ ಹೊಸ ಬೋರ್ ವೆಲ್ ಕೊರೆಸಿದ್ದರು. ಆದರೆ ತನ್ನ ಜಮೀನಿನ ಮಧ್ಯ ಭಾಗದಲ್ಲೇ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ. ಅವರ ಜಮೀನು ಎರಡು ಭಾಗವಾಗಿತ್ತು. ಹೀಗಾಗಿ ಒಂದು ಭಾಗದ ಜಮೀನಿನಿಂದ ಕಡೆಯಿಂದ ಮತ್ತೊಂದು ಜಮೀನಿಗೆ ನೀರು ಹಾಯಿಸಲು ರಾಜಣ್ಣ ಮುಂದಾಗಿದ್ದರು.
ಈ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಾಣ ಮಾಡಿದ್ದ ಹಳ್ಳದಲ್ಲಿ ನೀರಿನ ಪೈಪ್ ಲೈನ್ ಅಳವಡಿಸಲು ರಾಜಣ್ಣ ಮುಂದಾಗಿದ್ದರು. ಪೈಪ್ ಲೈನ್ ಒಳಗಡೆ ಇಳಿದ ಸಂದರ್ಭದಲ್ಲಿ ಮಣ್ಣು ಕುಸಿದು ಬಿದ್ದ ಕಾರಣ ರಾಜಣ್ಣ ಪೈಪ್ ಲೈನ್ ನಡುವೆ ಸಿಲುಕಿಕೊಂಡಿದ್ದರು.
ವಿಷಯ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಪೈಪ್ ಲೈನ್ ನಲ್ಲಿದ್ದ ರೈತನನ್ನು ರಕ್ಷಿಸಿದ್ದಾರೆ.
Discussion about this post