ಉಪ್ಪಿನಂಗಡಿ : ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ಕೆಮ್ಮಾರು ಎಂಬಲ್ಲಿ ನಡೆದಿದೆ.
ಜೂನ್ 19 ರಂದು ಮಗುವಿನ ತಂದೆ ತಾಯಿ ಮನೆಯನ್ನು ಸ್ವಚ್ಛಗೊಳಿಸಿದ್ದರು. ಈ ವೇಳೆ ಪೈಪ್ ಗಳು ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಒಂದು ಕಡೆ ರಾಶಿ ಹಾಕಿದ್ದರು. ಅದರಲ್ಲಿ ಮೂರು ನಾಲ್ಕು ತಿಂಗಳ ಹಿಂದೆ ತಂದಿದ್ದ
ಇಲಿ ಪಾಷಾಣದ ಟ್ಯೂಬ್ ಕೂಡಾ ಸೇರಿತ್ತು. ಮನೆಯವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಗು ಅದನ್ನು ತಿಂದಿದೆ.
ಮಧ್ಯಾಹ್ನ ಹೊತ್ತಿಗೆ ಮಗು ವಾಂತಿ ಆರಂಭಿಸಿದಾಗ ಪೋಷಕರು ಮಗುವನ್ನು ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟು ಹೊತ್ತಿಗೆ ಮಗು ಮೃತಪಟ್ಟಿತ್ತು.
Discussion about this post