ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಅದು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಅಂಗಡಿಗಳನ್ನು ಮುಚ್ಚಬೇಕು ಅನ್ನುವ ಆದೇಶವಿದ್ದರೂ ಸಮಯ ಮೀರಿ ತೆರೆಯಲಾಗುತ್ತಿದೆ. ಅನಗತ್ಯವಾಗಿ ರಸ್ತೆಗಿಳಿಯಬಾರದು ಅನ್ನುವ ಆದೇಶವಿದ್ದರೂ ರಸ್ತೆಗಳಲ್ಲಿ ಗಂಟೆ 10 ಕಳೆದರೂ ವಾಹನ ಓಡಾಡುತ್ತಿರುತ್ತದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಗಳ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಕೊರೋನಾ ಸೋಂಕು ಏರುತ್ತಿರುವ ಗ್ರಾಮಗಳ ಪಿಡಿಓ ಹಾಗೂ ಸದಸ್ಯರು ಎಚ್ಚೆತ್ತುಕೊಳ್ಳದಿದ್ರೆ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಇದೀಗ ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಏರತೊಡಗಿದೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕಾಳಿಂಗ ಹಿತ್ಲುವಿನ 1 ಮನೆ,ಅಂಬಟದ 1 ಮನೆ, ಸರ್ವೇ ಗ್ರಾಮದ ಕೂಡು ರಸ್ತೆ 2 ಮನೆ ಮತ್ತು ನನ್ನವನದಲ್ಲಿ 2 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈಗಾಗಲೇ ಗ್ರಾಮದಲ್ಲಿ 41 ಸಕ್ರಿಯ ಪ್ರಕರಣಗಳಿದ್ದು, ಒಂದು ವೇಳೆ ಸೋಂಕಿತರ ಸಂಖ್ಯೆ ಅರ್ಧ ಶತಕ ಬಾರಿಸಿದರೆ ಇಡೀ ಗ್ರಾಮ ಸೀಲ್ ಡೌನ್ ಆಗಲಿದೆ. ಕೆಲವೇ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ಕೇವಲ 6 ಪಾಸಿಟಿವ್ ಪ್ರಕರಣವಿತ್ತು ಅನ್ನುವುದು ಸ್ಮರಿಸಬಹುದು.
Discussion about this post