ಇಡೀ ಜಗತ್ತಿಗೆ ಕೊರೋನಾ ಹರಡಿದ ಚೀನಾದ ಬಾವಲಿಗಳಲ್ಲಿ ಇನ್ನೂ 24 ಹೊಸ ಮಾದರಿಯ ಕೊರೋನಾ ವೈರಸ್ ಗಳು ಪತ್ತೆಯಾಗಿದೆ.
ಅಗ್ನೇಯ ಚೀನಾದ ಕಾಡಿನಲ್ಲಿರುವ ಬಾವಲಿಗಳಲ್ಲಿ 24 ಮಾದರಿಯ ಕೊರೋನಾ ವಂಶವಾಹಿಗಳನ್ನು ಪತ್ತೆ ಮಾಡಲಾಗಿದೆ. 2019ರ ಮೇ ತಿಂಗಳಿನಿಂದ 2020ರ ನವೆಂಬರ್ ಅವಧಿಯಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ.
ಬಾವಲಿಗಳ ಮಲ ಮೂತ್ರ ಹಾಗೂ ಗಂಟಲು ದ್ರವ ಪರೀಕ್ಷಿಸಿ ವೈರಸ್ ಪತ್ತೆಮಾಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕೊರೋನಾ ವೈರಸ್ ಮೂಲ ಪತ್ತೆಗೆ ವಿವಿಧ ದೇಶಗಳು ತನಿಖೆ ಆದೇಶಿಸಿದ ಬೆನ್ನಲ್ಲೇ ಈ ಸುದ್ದಿ ಪ್ರಕಟಗೊಂಡಿದೆ.
ಕೊರೋನಾ ಸೋಂಕು ಹುಟ್ಟಿದ್ದು ಬಾವಲಿಗಳಿಂದಲೋ, ಚೀನಾದ ವುಹಾನ್ ಲ್ಯಾಬ್ ನಿಂದಲೋ ಅನ್ನುವ ಪ್ರಶ್ನೆ ನಡುವೆ ಬಂದಿರುವ ಈ ಸಂಶೋಧನೆಗೆ ಸಂಶಯಕ್ಕೆ ಕಾರಣವಾಗಿದೆ. ಈಗಾಗಲೇ ವೈರಸ ಮೂಲ ವುಹಾನ್ ಲ್ಯಾಬ್ ಅನ್ನುವುದಕ್ಕೆ ಸಾಕ್ಷಿಗಳು ಸಿಕ್ಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರಬಹುದಾದ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಈ ಹೊಸ ಸಂಶೋಧನೆ ಮೂಲಕ ದಾರಿ ತಪ್ಪಿಸಲು ಮುಂದಾಗಿದೆ ಅನ್ನುವುದು ಸ್ಪಷ್ಟ. ಕೊರೋನಾ ಸೋಂಕಿಗೆ ಪೂರ್ವಜರಿದ್ದಾರೆ ಅನ್ನುವುದನ್ನು ತೋರಿಸುವುದಷ್ಟೇ ಈ ಸಂಶೋಧನೆಯ ಉದ್ದೇಶ.
Discussion about this post