ಬೆಂಗಳೂರು : ರಾಜ್ಯ ಬಿಜೆಪಿಯ ಬಂಡಾಯವನ್ನು ಶಮನಗೊಳಿಸುವಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಅವರ ಬಳಗ ವಿಫಲವಾಗಿದೆ. ಶಾಸಕರು ಅಸಮಾಧಾನಗೊಂಡ ಸಂದರ್ಭದಲ್ಲಿ ಅವರನ್ನು ಕರೆದು ಮಾತನಾಡಿಸುವುದು ರಾಜ್ಯ ಬಿಜೆಪಿ ನಾಯಕರ ಕರ್ತವ್ಯ. ಜೊತೆಗೆ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಕೂಡಾ ರಾಜ್ಯ ಬಿಜೆಪಿ ಅಧ್ಯಕ್ಷರು ಮಾಡಬೇಕಾಗಿತ್ತು. ಆದರೆ ಹಾಗಾಗಿಲ್ಲ.
ಇದೇ ಕಾರಣದಿಂದ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡವರು ದೆಹಲಿ ವಿಮಾನ ಹತ್ತುವಂತಾಗಿದೆ. ಹೋಗ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ ಶಾಸಕರ ಸಮಸ್ಯೆಗಳನ್ನು ಆಲಿಸುತ್ತಾರೆಯೇ ಖಂಡಿತಾ ಇಲ್ಲ. ಯಡಿಯೂರಪ್ಪ ಈಸ್ ಅವರ್ ಸಿಎಂ ಎಂದು ಹೇಳುತ್ತಾರೆ ಬಿಟ್ರೆ, ಪಕ್ಷ ಕಟ್ಟುವ ನಿಟ್ಟಿನಲ್ಲಿ ಅವರ ಕೊಡುಗೆ ಕರ್ನಾಟಕಕ್ಕೆ ಶೂನ್ಯ.
ಇಬ್ಬರು ಮಾಡಿದ ತಪ್ಪಿನ ಕಾರಣದಿಂದಲೇ ಇದೀಗ ಬಂಡಾಯ ಬಾವುಟ ದೆಹಲಿಯಲ್ಲಿ ಹಾರಾಡುತ್ತಿದೆ.ಪದೇ ಪದೇ ಕರ್ನಾಟಕದ ಶಾಸಕರು ದೆಹಲಿ ಯಾತ್ರೆ ಮಾಡುತ್ತಿರುವುದು ಅಮಿತ್ ಶಾ ಅವರ ಗಮನಕ್ಕೂ ಬಂದಿದೆ. ಹೀಗಾಗಿ ಶಾಸಕರ ಜೊತೆಗೆ ಸಭೆ ನಡೆಸುವಂತೆ ಅರುಣ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.
ಹೀಗಾಗಿ ಜೂನ್ 18 ರಂದು ಶಾಸಕರ ಜೊತೆ ಅರುಣ್ ಸಿಂಗ್ ಚರ್ಚೆ ನಡೆಸಲಿದ್ದು, ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ವೇಳೆ ಬಹುತೇಕ ಶಾಸಕರು, ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರ ಕೆಲಸವಾಗುತ್ತದೆ, ನಮ್ಮ ಕೆಲಸ ಆಗೋದಿಲ್ಲ ಎಂದು ದೂರುವುದು ಖಚಿತ. ಜೊತೆಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಂದ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಯಡಿಯೂರಪ್ಪ ಅವರನ್ನು ಭೇಟಿಯಾಗಬೇಕಾದರೆ ವಿಜಯೇಂದ್ರ ಅನುಮತಿ ಪಡೆಯಬೇಕಾಗಿದೆ.ಯಾವುದೇ ಕೆಲಸವಿದ್ದರೂ ಮೊದಲು ವಿಜಯೇಂದ್ರ ಅವರಿಗೆ ವಿವರಿಸಬೇಕಾಗಿದೆ. ಹೀಗಾಗಿ ವಿಜಯೇಂದ್ರ ಅವರನ್ನು ಮೊದಲು ನಿಯಂತ್ರಿಸಿ ಎಂದು ಶಾಸಕರು ಮನವಿ ಮಾಡೋ ಸಾಧ್ಯತೆಗಳಿದೆ.
Discussion about this post