ಕಳೆದ ಕೆಲವು ದಿನಗಳಿಂದ ನೀವು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಫೇಸ್ ಬುಕ್ ಖಾತೆಯನ್ನು ಗಮನಿಸಿದ್ರೆ ಬದಲಾವಣೆಯೊಂದನ್ನು ಗಮನಿಸಿರುತ್ತೀರಿ.
ನಾವೆಲ್ಲ ಫೇಸ್ ಬುಕ್ ಮುಂದೆ ಕೂತು ಬೆರಳು ಉಜ್ಜುತ್ತಿದ್ರೆ, ಝುಕರ್ ಬರ್ಗ್ ಬಯಲಲ್ಲಿ ಈಟಿ ಎಸೆಯೋ ಆಟ ಆಡ್ತಾ ಇದ್ರು. ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಇದೊಂದು ವಿಡಿಯೋ ಮಾತ್ರವಲ್ಲದೆ ತಮ್ಮ ಚಟುವಟಿಕೆಯ ಇತರ ವಿಡಿಯೋಗಳನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ.
ಹೀಗೆ ಖುಷಿ ಖುಷಿಯಾಗಿ ಆಟ ಆಡುತ್ತಿರುವ ಮುಖ ಪುಸ್ತಕದ ಸಿಇಒ ತನ್ನ ಸಿಬ್ಬಂದಿಗಳಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಯಾರಿಗೆಲ್ಲಾ ಮನೆಯಿಂದಲೇ ಕೆಲಸ ಮಾಡುವ ಮನಸ್ಸಿದೆಯೋ ಅವರೆಲ್ಲರೂ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಮಾಡಬಹುದು ಎಂದು ಸೂಚಿಸಿದ್ದಾರೆ. ನಮ್ಮ ಸಿಬ್ಬಂದಿ ಎಲ್ಲಿ ಕೆಲಸ ಮಾಡುತ್ತಾರೆ ಅನ್ನುವುದು ಮುಖ್ಯವಲ್ಲ. ಹೇಗೆ ಕೆಲಸ ಮಾಡುತ್ತಾರೆ ಅನ್ನೋದು ಮುಖ್ಯ ಅಂದಿರುವ ಅವರು ಜೂನ್ 15ರ ನಂತರ ಈ ಆಯ್ಕೆ ಉದ್ಯೋಗಿಗಳಿಗೆ ಸಿಗಲಿದೆ ಅಂದಿದ್ದಾರೆ.
ಹಾಗಂತ ಎಲ್ಲಾ ಸಿಬ್ಬಂದಿಗಳಿಗೆ ಈ ಅವಕಾಶ ಇರೋದಿಲ್ಲ. ಕೆಲ ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ನಿರ್ವಹಿಸೋದು ಅನಿವಾರ್ಯ. ಅಂತವರು ಕಚೇರಿಗೆ ಬರಲೇಬೇಕು.
Discussion about this post