ನವದೆಹಲಿ : ಕೊರೋನಾ ಮಹಾಮಾರಿ ಯಾವಾಗ ತೊಲಗುತ್ತದೋ ಎಂದು ವಿಶ್ವ ಕಾಯುತ್ತಿದೆ.ಆದರೆ ರಕ್ತ ಬೀಜಾಸುರನಂತೆ ಮತ್ತೆ ಮತ್ತೆ ರೂಪಾಂತರಿಯಾಗಿ ಕಾಣಿಸಿಕೊಂಡು ಜಗತ್ತನ್ನೇ ಕಂಗಾಲು ಮಾಡಿದೆ.
ಈ ನಡುವೆ ಮಲೇಷ್ಯಾದ 8 ಮಂದಿಯಲ್ಲಿ 50 ವರ್ಷದಷ್ಟು ಹಳೆಯ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ಮಾನವರಲ್ಲಿ ಕಾಣಿಸಿಕೊಳ್ಳುವ ಕೊರೋನಾ ಗೆ ಹೋಲಿಸಿದರೆ ನಾಯಿಗಳಲ್ಲಿ ಕಂಡು ಬರುವ ಕೊರೋನಾ ಸೋಂಕು 50 ವರ್ಷದಷ್ಟು ಹಳೆಯದು. ಇದು ಹೆಚ್ಚು ಹರಡುತ್ತಿರಲ್ಲವಾದ್ದರಿಂದ ಈ ಬಗ್ಗೆ ಯಾರೂ ಕೂಡಾ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ಇದೀಗ ಮಲೇಷ್ಯಾದ ಸಾರಾವಕ್ ಆಸ್ಪತ್ರೆ ಸೇರಿದ್ದ 192 ಮಂದಿಯ ಗಂಟಲು ದ್ರವದ ಮಾದರಿಯನ್ನು ತೆಗೆದು ಪರೀಕ್ಷೆ ನಡೆಸಿದಾಗ 13 ಮಂದಿಯಲ್ಲಿ ನಾಯಿ ಕೊರೋನಾ ಪತ್ತೆಯಾಗಿದೆ. ಒಳ್ಳೆಯ ಸುದ್ದಿ ಅಂದ್ರೆ ಈ ಸೋಂಕಿಗೆ ಚಿಕಿತ್ಸೆ ಪಡೆದಿರುವ ಎಲ್ಲರೂ ಕೂಡಾ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹಾಗಾದ್ರೆ ನಾಯಿಗಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮನುಷ್ಯರಿಗೆ ತಗುಲಿದ್ದು ಹೇಗೆ ಅನ್ನುವ ಕುರಿತಂತೆ ತಜ್ಞರು ಸಂಶೋಧನೆ ಪ್ರಾರಂಭಿಸಿದ್ದಾರೆ. ಜೊತೆಗೆ ಮನುಷ್ಯರಲ್ಲಿ ಈ ಸೋಂಕು ಕಾಣಿಸಿಕೊಂಡ ವೇಳೆ ರೋಗ ಲಕ್ಷಣಗಳು ಹೇಗಿರುತ್ತದೆ ಅನ್ನುವ ಕುರಿತಂತೆಯೂ ಸಂಶೋಧನೆಗಳು ಪ್ರಾರಂಭಗೊಂಡಿದೆ.
Discussion about this post