ಮಂಗಳೂರು : ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಶ್ರೀರಾಮ ನವಮಿಯ ಪುಣ್ಯದಿನದಂದು ನೂತನ ಪೀಠಾಧಿಪತಿಯ ಘೋಷಣೆಯಾಗಲಿದೆ ಅನ್ನಲಾಗಿತ್ತು.
ಆದರೆ ಇದೀಗ ಶಿರೂರ ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಚ್ಚರಿ ಅಂದ್ರೆ ಶಿರೂರು ಮಠದ ಪೀಠಾಧಿಪತಿಯಾಗಿದ್ದ ಲಕ್ಷ್ಮೀವರ ತೀರ್ಥರ ಸಹೋದರ ಕ್ಯಾತೆ ತೆಗೆದಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ಮಠದ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಅನ್ನುವ ಕುರಿತಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದೆ. ಜೊತೆಗೆ ಅಷ್ಟಮಠಗಳ ಲಿಖಿತ ಸಂವಿಧಾನ ಪ್ರಕಾರ, ಬಾಲಯತಿ ನೇಮಿಸುವ ಪದ್ದತಿಯನ್ನು ಈಗಾಗಲೇ ಕೈ ಬಿಡಲಾಗಿದೆ. ಮಠಾಧೀಶರಾಗಿ ಸನ್ಯಾಸ ಸ್ವೀಕರಿಸುವ ವಟುವಿಗೆ 20 ವರ್ಷ ವಯಸ್ಸಾಗಿರಬೇಕು ಹಾಗೂ 10 ವರ್ಷಗಳ ವೇದಾಂತ ಅಧ್ಯಯನ ಆಗಿರಬೇಕು ಅನ್ನುವ ಅಂಶ ಸಂವಿಧಾನದಲ್ಲಿದೆ ಅಂದಿದ್ದಾರೆ.
ಒಂದು ವೇಳೆ ನಮ್ಮ ವಿರೋಧವನ್ನು ಲೆಕ್ಕಿಸದೆ ಬಾಲಕನಿಗೆ ಸನ್ಯಾಸ ನೀಡಿದರೆ ಕೋರ್ಟ್ ಮೆಟ್ಟಿಲು ಹತ್ತುವುದಾಗಿ ಎಚ್ಚರಿಸಿರುವ ಲಾತವ್ಯ ಅಚಾರ್ಯ ಸೋದೆ ಮಠದ ಆಡಳಿತದಲ್ಲಿ ಶಿರೂರು ಮಠದ ಆಸ್ತಿ ಪಾಸ್ತಿ, ವ್ಯವಹಾರ ಸರಿಯಾಗಿ ನಡೆಯುತ್ತಿಲ್ಲ ಹೀಗಾಗಿ ಕೋರ್ಟ್ ತೀರ್ಪು ಬರೋ ತನಕ ಪೀಠಾಧಿಕಾರಿ ನೇಮಿಸುವುದಕ್ಕೆ ಅವಕಾಸ ಇಲ್ಲ ಅಂದಿದ್ದಾರೆ.
ಇದನ್ನೂ ಓದಿ : ಕೊನೆಗೂ ಶಿರೂರು ಮಠಕ್ಕೆ ಪೀಠಾಧಿಪತಿ : ಸೋದೆ ಮಠದ ಶ್ರೀಗಳ ತಾಕತ್ತು ಮೆಚ್ಚಲೇಬೇಕು
ಜುಲೈ 19, 2018ರಂದು ಸಂಶಯಾಸ್ಪದ ರೀತಿಯಲ್ಲಿ ಲಕ್ಷ್ಮೀವರತೀರ್ಥ ಸ್ವಾಮೀಜಿ ನಿಧನ ಹೊಂದಿದ್ದರು. ಬಳಿಕ ದ್ವಂದ ಮಠ ಎಂದು ಕರೆಸಿಕೊಂಡಿರುವ ಸೋದೆ ಮಠ ಉಡುಪಿಯ ಶಿರೂರು ಮಠ ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಇದೀಗ ಸೋದೆ ಮಠದ ಶ್ರೀಗಳೇ ಶಿರೂರು ಮಠಕ್ಕೆ ಪೀಠಾಧಿಪತಿಯನ್ನೂ ನೇಮಕ ಮಾಡಬೇಕಾಗಿದೆ.
ಒಟ್ಟಾರೆ ಈ ವಿವಾದವನ್ನು ನೋಡಿದಾಗ ಮಠದಲ್ಲೂ ಕುಟುಂಬ ರಾಜಕೀಯದ ನೆರಳು ಕಾಣಿಸುತ್ತಿದೆ. ಅಷ್ಟ ಮಠದ ಪೀಠಾಧಿಪತಿಯಾಗುವವರು ತಮ್ಮ ಕುಟುಂಬದ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಬಂದಿರುತ್ತಾರೆ. ಹಾಗೇ ಮಾಡುವ ಮುನ್ನ ಹಲವು ವಿಧಿ ವಿಧಾನಗಳನ್ನೂ ಪಾಲಿಸಲಾಗುತ್ತದೆ. ಒಂದು ಸಲ ಪೀಠಾಧಿಪತಿಯಾದ ಮೇಲೆ ಅವರ ತಂದೆ ತಾಯಿ ಸಹೋದರರು ಆ ಮಠದಲ್ಲಿ ಅಧಿಕಾರ ಚಲಾಯಿಸಲು ಹೇಗೆ ಸಾಧ್ಯ. ಮಠ ಭಕ್ತರಿಗೆ ಸೇರಿದ್ದು ಹೊರತು ಅದು ಕುಟುಂಬದ ಆಸ್ತಿಯಲ್ಲ. ಹಾಗಿಗಿ ಶಿರೂರು ಮಠದ ಪೀಠಾಧಿಪತಿ ನೇಮಕ ವಿಚಾರದಲ್ಲಿ ಭಕ್ತರು ಆಕ್ಷೇಪ ವ್ಯಕ್ತಪಡಿಸಬೇಕೆ ಹೊರತು ಲಕ್ಷ್ಮೀವರತೀರ್ಥರ ಕುಟುಂಬಸ್ಥರು ದನಿ ಎತ್ತಿರುವುದರ ಹಿಂದಿನ ರಹಸ್ಯವೇನು..?
Discussion about this post