ಬಿಗ್ ಬಾಸ್ ಮನೆಯ ಆಟ ರಂಗೇರುತ್ತಿದೆ. ಮೂರು ವಿಕೆಟ್ ಗಳು ಪತನಗೊಂಡ ಬಳಿಕ ತಮ್ಮವರು ಯಾರು ಅನ್ನುವುದನ್ನೇ ಗುರುತಿಸಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ಎಲ್ಲರೂ ಪರಸ್ಪರ ಸ್ಪರ್ಧಿಗಳೇ.
ಆದರೆ ಅಷ್ಟು ಸ್ಪರ್ಧಿಗಳ ಪೈಕಿ ಸ್ವಲ್ಪ ಡಿಫರೆಂಟ್ ಅನ್ನಿಸೋದು ಶಂಕರ್ ಅಶ್ವಥ್. ವಯಸ್ಸು ಮತ್ತು ಅನುಭವದ ಕಾರಣದಿಂದ ಮಹಾಮನೆ ಅವರಿಗೊಂದು ಆಟದಂತೆ ಕಾಣಿಸುತ್ತಿಲ್ಲ. ಅದೊಂದು ಕುಟುಂಬದಂತೆ ಅವರಿಗೆ ಭಾಸವಾಗುತ್ತಿದೆ. ಆಟವಾಡಬೇಕು ಎಂದು ಮೈಕೊಡವಿ ನಿಂತರೆ ಅವರಿಗೆ ಅನೇಕ ಕಟ್ಟುಪಾಡುಗಳು ನೆನಪಾಗುತ್ತದೆ.
ನಿನ್ನೆ ಈಜುಕೊಳ ಆಟದಲ್ಲೂ ಆಡುತ್ತೇನೆ ಎಂದು ಎದ್ದು ನಿಂತವರಿಗೆ ಎದುರಾಗಿದ್ದು, ನಾಳೆ ಹುಡುಗಿಯರ ಮೈ ಮುಟ್ಟಿದ ಆರೋಪ ನನ್ನ ಮೇಲೆ ಬಂದರೆ ಅನ್ನುವ ಆತಂಕ. ಈ ಹಿಂದೆ ಸ್ಫೋಟ್ಸ್ ಸ್ಪಿರಿಟ್ ನಡುವೆ ಬ್ಯಾಡ್ ಟಚ್ ಕಮೆಂಟ್ ಗಳು ಬಂದಿತ್ತು.
ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ನಲ್ಲಿ ವೈಷ್ಣವಿ ಮತ್ತು ದಿವ್ಯಾ ಸುರೇಶ್ 20 ಗಂಟೆಗಳ ಕಾಲ ಅದ್ಭುತ ಆಟವಾಡಿದ್ದರು. ಆ ಹುಡುಗಿಯರ ಆಟದ ಮುಂದೆ ಉಳಿದವರ ಆಟ ಅದ್ಯಾವ ಲೆಕ್ಕಕ್ಕೂ ಇಲ್ಲ. ಆದರೆ ತಂಡದ ಸದಸ್ಯರ ನಡುವಿನ ಸಮನ್ವಯತೆ ಕೊರತೆ, ಮಾವ ಎಂದು ಕರೆಸಿಕೊಂಡವನ ಕ್ಯಾತೆಯ ಕಾರಣದಿಂದ ಆಟ ಹಳ್ಳ ಹಿಡಿದಿತ್ತು.
ಸಂಬರಂಗಿ ದಿವ್ಯಾ ಸುರೇಶ್ ಮುಖಕ್ಕೆ ಚೆಂಡು ಹೊಡೆಯದೇ ಇರುತ್ತಿದ್ರೆ ಆಟದ ಖದರ್ ಬೇರೆಯದ್ದೇ ಇರುತ್ತಿತ್ತು. ಇನ್ನು ಶುಭ ಪೂಂಜಾಳಿಗೆ ನಾಯಕತ್ವದ ಗುಣಗಳೇ ಇರಲಿಲ್ಲ. ಇದು ಆಟ ಹಾದಿ ತಪ್ಪಲು ಪ್ರಮುಖ ಕಾರಣ.
ಈ ನಡುವೆ ಹಾದಿ ತಪ್ಪಿದ ಆಟ, ದಿಕ್ಕು ದೆಸೆಯಿಲ್ಲದ ಸ್ಪರ್ಧಿಗಳನ್ನು ಕಂಡ ಶಂಕರ್ ಅಶ್ವಥ್, ದಿವ್ಯಾ ಹಾಗೂ ವೈಷ್ಣವಿಯರ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಆದದ್ದು ಆಗ್ಲಿ, ಬಂದದ್ದು ಬರ್ಲಿ ಅನ್ನುವ ಗಟ್ಟಿ ನಿರ್ಧಾರದ ಮೂಲಕ ಕ್ಷಮಿಸಿಬಿಡು ತಾಯಿ ಎಂದು ಈಜುಕೊಳಕ್ಕೆ ಹಾರಿ ವೈಷ್ಣವಿ ಅವರನ್ನು ಕೆಳಗೆ ಬೀಳಿಸಿದ್ದಾರೆ. ಹೊಟ್ಟೆಗಿಲ್ಲದೆ 20 ಗಂಟೆಗಳ ಕಾಲ ಕೂತ ಹುಡುಗಿಯರ ಪರಿಸ್ಥಿತಿ ಕಂಡು ಮನಸ್ಸು ಕರಗಿ ಮಾಡಿದ ಕಾರ್ಯ ಆದಾಗಿತ್ತು. ತಂಡದ ಗೆಲುವಿಗಿಂತಲೂ ಮಾನವೀಯತೆಗೆ ಗೆಲುವಾಗಬೇಕು ಅನ್ನುವ ಕಾರಣಕ್ಕೆ ಆಡಿದ ಆಟವಾಗಿತ್ತು ಅದು.
ಆದರೆ ಅದ್ಯಾವುದನ್ನು ಅರ್ಥಮಾಡಿಕೊಳ್ಳದ ಸ್ಪರ್ಧಿಗಳು ಶಂಕರ್ ಮುಂದೆ ಎಗರಾಡಿದ್ದಾರೆ. ನಿಧಿ ಸುಬ್ಬಯ್ಯ ಅಂತೂ ಕಣ್ಣೀರು ಹಾಕಿ ನಾಟಕವಾಡಿದ್ದಾರೆ.
ಮನೆಮಂದಿ ಏನಾದರೂ ಆಡಿಕೊಳ್ಳಲಿ, ವೀಕ್ಷಕರಿಗೆ ಅವೆಲ್ಲಾ ಲೆಕ್ಕವಿಲ್ಲ. ವೀಕ್ಷಕರು ಕಾಯುತ್ತಿರೋದು, ಬಿಗ್ ಬಾಸ್ ನಿಲುವೇನು, ನಾಡಿದ್ದು ಸುದೀಪ್ ಏನೂ ಹೇಳ್ತಾರೆ ಎಂದು.
Discussion about this post