ಕಿರುತೆರೆ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನುವ ಸುದ್ದಿ ಸಾಕಷ್ಟು ಹಿಂದಿನಿಂದಲೂ ಕೇಳಿ ಬಂದಿತ್ತು. ಆದರೆ ಅವರಿಬ್ಬರೂ ಆ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಇನ್ನು ಕವಿತಾ ಗೌಡ ಬಿಗ್ ಬಾಸ್ ಮನೆಯಲ್ಲಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು ಗಮನಿಸಿದ ಮಂದಿ ಇದೆಲ್ಲಾ ಗಾಳಿ ಸುದ್ದಿ ಅಂದುಕೊಂಡಿದ್ದರು, ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕವಿತಾ ಮತ್ತೆ ಚಂದನ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಅಲ್ಲಿಗೆ ಕಿರುತೆರೆ ಜೋಡಿ ಪ್ರೀತಿಯಲ್ಲಿ ಬಿದ್ದಿರುವುದು ಖಚಿತವಾಗಿತ್ತು.
ತೆಲುಗಿನ ಸಾವಿತ್ರಮ್ಮಗಾರಿ ಅಬ್ಬಾಯಿ ಧಾರಾವಾಹಿಯ ಮೇಜರ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಚಂದನ್ ಮೊನ್ನೆ ಮೊನ್ನೆ ತಂಡದಿಂದ ಹೊರ ಬರುವ ಮುನ್ಸೂಚನೆ ಸಿಕ್ಕಿತ್ತು. ಅದಕ್ಕೆ ಪೂರಕವಾಗಿ ಚಂದನ್ ಪಾತ್ರ ಕೂಡಾ ಅಂತ್ಯವಾಗಿತ್ತು. ಆಗ್ಲೂ ಚಂದನ್ ಮದುವೆಯಾಗ್ತಾರೆ ಅನ್ನಲಾಗಿತ್ತು.
ಆಗ ಮದುವೆ ಹುಡುಗಿ ಕವಿತಾ ಅವರೇ ಎಂದು ಕೇಳಿದರೆ, ಯಸ್ ಅಂದ್ರೆ ಅದೇ ಸುದ್ದಿ ಹರಡುತ್ತದೆ, ನೋ ಅಂದರೆ ಮತ್ಯಾರು ಅನ್ನುವ ಪ್ರಶ್ನೆ ಕಾಣಿಸುತ್ತದೆ., ಹಾಗಾಗಿ ಎರಡೂ ಬೇಡ ಅಂದಿದ್ದರು.
ಇದನ್ನೂ ಓದಿ : ಭೇಷ್ ಕವಿತಾ :ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ವಿರುದ್ಧ ಕಾನೂನು ಹೋರಾಟ ಶುರುವಿಟ್ಟ ಚಿನ್ನು
ಆದರೆ ಇದೀಗ ಚಂದನ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಾವು ಮದುವೆಯಾಗುತ್ತಿರುವ ಸುದ್ದಿ ಪ್ರಕಟಿಸಿದ್ದಾರೆ. ಜೊತೆಗೆ ಹುಡುಗಿ ಯಾರು ಅನ್ನುವುದಕ್ಕೆ ಸಾಕ್ಷಿಯಾಗಿ ಕವಿತಾ ಅವರೇ ಇದ್ದಾರೆ.
ಲಭ್ಯ ಮಾಹಿತಿಗಳ ಪ್ರಕಾರ ಏಪ್ರಿಲ್ 1 ರಂದು ಮದುವೆ ನಡೆಯಲಿದೆಯಂತೆ.
ಅಂದ ಹಾಗೇ ಚಂದನ್ ಕುಮಾರ್ ನಟನೆಯ ಜೊತೆಗೆ ಸಹಕಾರ ನಗರದಲ್ಲಿ ದೊನ್ನೆ ಬಿರಿಯಾನಿ ಪ್ಯಾಲೇಸ್ ಅನ್ನುವ ಹೊಟೇಲ್ ಅನ್ನು ನಡೆಸುತ್ತಿದ್ದಾರೆ.
Discussion about this post