ಬೆಂಗಳೂರು : ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಸರಳ ವಿವಾಹ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಪ್ರಕರಣ ಪೊಲೀಸ್ ಮೆಟ್ಟಿಲು ಹತ್ತದಿರುತ್ತಿದ್ರೆ ಅದ್ಯಾವುದೋ ಸಂಘಟನೆ ಮಂದಿ ಪ್ರಥಮ ರಾತ್ರಿಯನ್ನೂ ಬಲವಂತವಾಗಿಯೇ ಮುಗಿಸಿರುತ್ತಿದ್ದರು.
ಈ ನಡುವೆ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರ ಕೊಟ್ಟೂರು ಅವರದ್ದೇ ತಪ್ಪು ಅನ್ನುವಂತೆ ಸುದ್ದಿಗಳು ಪ್ರಕಟವಾಗಲಾರಂಭಿಸಿತೋ, ಮದುವೆ ಬಗ್ಗೆ ಚೈತ್ರಾ ಬಾಯಿ ಬಿಟ್ಟಿದ್ದಾರೆ. ಇದೊಂದು ಬಲವಂತದ ಮದುವೆ ಅಲ್ಲ ಅನ್ನುವುದಕ್ಕೆ ಸಾಕ್ಷಿ ಕೊಟ್ಟಿರುವ ಅವರು ತಮ್ಮ ಗೆಳೆಯರಿಗೆ ಬಾಯ್ ಫ್ರೆಂಡ್ ಜೊತೆಗಿನ ಖಾಸಗಿ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಜೊತೆಗೆ ನಮ್ಮ ಮಧ್ಯ ಏನೂ ಇಲ್ಲವೇನೋ, ಬಲವಂತವಾಗಿ ಮದುವೆ ಆಗಿದೆ ಅನ್ನೋ ವಿಷಯ ಇದೆ ಅಲ್ವ. ಹಾಗಾಗಿ ಈ ಫೋಟೋ ವಿಡಿಯೋ ಎಲ್ಲೆಡೆ ಹಂಚಿ.ನಮ್ಮ ಪ್ರೀತಿ ಆಪ್ತತೆ ನಿಕಟನೆ ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮದುವೆ ವಿವಾದ ಕುರಿತಂತೆ ಮಾತನಾಡಿರುವ ಚೈತ್ರಾ ಪೊಲೀಸರು ಇನ್ನೆರೆಡು ದಿನಗಳಲ್ಲಿ ಸಮಸ್ಯೆಯನ್ನು ಬಗೆ ಹರಿಸಿಕೊಂಡು ಬನ್ನಿ ಇಲ್ಲವಾದಲ್ಲಿ ನಾವು ಕಂಪ್ಲೆಟ್ ಲಾಡ್ಜ್ ಮಾಡುತ್ತೇವೆ ಅಂದಿದ್ದಾರೆ. ಹೀಗಾಗಿ ನಾವು ದೂರು ಕೊಡುವುದನ್ನು ತಡೆ ಹಿಡಿದಿದ್ದೇವೆ. ಈಗ ಎರಡು ದಿನಗಳ ಕಾಲಾವಕಾಶ ಇರುವುದರಿಂದ ಅವರು ಮಾತನಾಡಲು ಬಂದರೆ ಮಾತನಾಡುತ್ತೇವೆ. ಇಲ್ಲವಾದಲ್ಲಿ ಮುಂದೆ ಮಾಡಬೇಕಾದ ಕ್ರಮದ ಕುರಿತು ಯೋಚಿಸುತ್ತೇವೆ ಅಂದಿದ್ದಾರೆ.
Discussion about this post