ನೆಲ್ಯಾಡಿ : ಬಸ್ ಹಾಗೂ ಕಂಟೈನರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಹಾಗೂ ಕಂಟೈನರ್ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದು, ಕಂಟೈನರ್ ಚಾಲಕ ಸಜೀವವಾಗಿ ದಹನವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.
ಬುಧವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಲಾರಿ ಮತ್ತು ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಎರಡೂ ವಾಹನಗಳು ಸುಟ್ಟು ಕರಕಲಾಗಿದೆ.
ದುರ್ಘಟನೆಯಲ್ಲಿ ಲಾರಿ ಚಾಲಕ ಸಜೀವ ದಹನಗೊಂಡಿದ್ದು, ಬಸ್ನಲ್ಲಿದ್ದ ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.
ನೆಲ್ಯಾಡಿಯ ಕಲ್ಕುಲಾಡಿ ಗ್ರಾಮದ ಪೆರಿಯಶಾಂತಿ ಬಳಿ ಮಧ್ಯರಾತ್ರಿ 11.30 ರಿಂದ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಕಂಟೈನರ್ ಚಾಲಕನನ್ನು ಮೈಸೂರು ಮೂಲದ ಸಂತೋಷ್ ಎಂದು ಗುರುತಿಸಲಾಗಿದೆ.
ರಾತ್ರಿ 11:50ರ ಸಮಯದಲ್ಲಿ ಬೆಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ ಗೆ ರಭಸವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಖಾಸಗಿ ಬಸ್ ಮತ್ತು ಕ್ಯಾಂಟರ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.
ಬಸ್ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಟೈನರ್ ನಲ್ಲಿ ಗ್ಯಾಸ್ ಬಳಕೆ ಮಾಡಲಾಗುತ್ತಿದ್ದು, ಅಪಘಾತದ ತೀವ್ರತೆಗೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿ ಉರಿದು ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕಡಬ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅವಘಡದಿಂದ ಗಾಬರಿಯಾಗಿದ್ದ ಪ್ರಯಾಣಿಕರನ್ನು ನಂತರ ಬೇರೊಂದು ಬಸ್ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇದೇ ಬಸ್ನಲ್ಲಿ ನಟಿ ನೀಮಾ ರೇ ಕೂಡ ಪ್ರಯಾಣ ಮಾಡುತ್ತಿದ್ದರು.
ಘಟನೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನೀಮಾ ರೇ ನಾವೆಲ್ಲಾ ಬದುಕಿ ಬಂದಿರುವುದೇ ದೇವರ ಆಶೀರ್ವಾದ ಅಂದಿದ್ದಾರೆ.
ಇದನ್ನೂ ಓದಿ : ನೈಟಿ ಮಾತ್ರ ಹಾಕೋಬೇಡ ಮೇನಕಾ : ಐಟಂ ಸಾಂಗ್ ನಲ್ಲಿ ಕಿಕ್ಕೇರಿಸಿದ ಲಾಸ್ಯ
ಡಿಕ್ಕಿ ಹೊಡೆದ ತಕ್ಷಣ ಬಸ್ನಲ್ಲಿ ಹೊಗೆ ಆವರಿಸಲಾರಂಭಿಸಿತು. ಅದರಿಂದ ಎಲ್ಲರೂ ಗಾಬರಿಗೊಂಡಿದ್ದಾರೆ. ಹೇಗೋ ಸಾಹಸಪಟ್ಟು ಬಾಗಿಲು ತೆರೆಯಲು ಪ್ರಯತ್ನಿಸಿ, ಬೆಂಕಿ ಆವರಿಸಿಕೊಳ್ಳುವ ಮುನ್ನ ಎಲ್ಲರೂ ಬಸ್ನಿಂದ ಹೊರ ಬಂದಿದ್ದಾರೆ. ಸ್ವಲ್ಪವೇ ತಡವಾಗಿದ್ದರೂ ಎಲ್ಲರೂ ಸಜೀವದಹನ ಆಗಬೇಕಾಗಿತ್ತು.
ಇದನ್ನೂ ಓದಿ : ಮಾಸ್ಕ್ ಧರಿಸದಿದ್ರೆ ಚಾಲಕರ ಲೈಸೆನ್ಸ್ ರದ್ದು… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ಕಾನೂನು
ಬಾಗಿಲು ತೆಗೆಯುವುದು ತುಂಬ ಕಷ್ಟ ಆಗಿತ್ತು. ಎಲ್ಲವೂ ಜಾಮ್ ಆಗಿತ್ತು. ತುಂಬ ಕಷ್ಟಪಟ್ಟು ಹೊರಬಂದೆವು. ನಾನು ಈಗ ಚೆನ್ನಾಗಿದ್ದೇನೆ. ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದೇವೆ. ಕೆಲವರಿಗೆ ಗಾಯಗಳಾಗಿವೆ ಎಂದು ನೀಮಾ ರೇ ಘಟನೆ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ : ಆಟೋ ಹತ್ತುವ ಮುನ್ನ ಇರಲಿ ಎಚ್ಚರ… ಒಂದೇ ದಿನ 34 ಆಟೋ ಚಾಲಕರಿಗೆ ಕೊರೋನಾ ಸೋಂಕು
ನೀಮಾ ರೇ ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ನಟಿಸಿದ್ದು ಇತ್ತೀಚೆಗೆ ಘೋಷಣೆಯಾದ 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ತುಳು ಸಿನಿಮಾ ಎಂಬ ಗೌರವಕ್ಕೆ ಪಾತ್ರವಾದ ‘ಪಿಂಗಾರ’ ಸಿನಿಮಾದಲ್ಲಿ ನಟಿಸಿದ್ದಾರೆ.
ಟ್ರೆಂಡಿಂಗ್ ಸ್ಟೋರಿ – ಇದನ್ನು ಓದಿ : ಲಾಟರಿ ಮಾರಾಟಗಾರ್ತಿಯ ಪ್ರಾಮಾಣಿಕತೆಯಿಂದ ಆ ಕುಟುಂಬಕ್ಕೆ ಸಿಕ್ಕಿದ್ದು 6 ಕೋಟಿ…!
ಇದಕ್ಕಿಂತ ಮುಂಚೆ 14th Feb, ಆರಂಭ ಅನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದರೊಂದಿಗೆ ತುಳುವಿನಲ್ಲಿ ಪಿಂಗಾರ, ದೊಂಬರಾಟ ದಗಲ್ ಬಾಜಿಲು ಅನ್ನುವ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ….
Discussion about this post