ಬೆಂಗಳೂರು : ಸಚಿವ ಡಾ.ಕೆ. ಸುಧಾಕರ್ ಅವರ ಒನ್ ವೈಫ್ ಛಾಲೆಂಜ್ ಸಂಚಲನ ಮೂಡಿಸಿದೆ.
ಸುಧಾಕರ್ ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್ ಗರಂ ಆಗಿದ್ದು, ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪಿಸಿದೆ.
ವಿಷಯ ಕುರಿತಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸುಧಾಕರ್ ಕೊಟ್ಟಿರುವ ಹೇಳಿಕೆಯಲ್ಲಿ ನನ್ನ ಹೆಸರು, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಕುಮಾರಸ್ವಾಮಿ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಅದು ಹತಾಶೆಯ ಹೇಳಿಕೆಯೋ, ದುರುದ್ದೇಶದ ಹೇಳಿಕೆಯೋ ನನಗೆ ಗೊತ್ತಿಲ್ಲ. 225 ಮಂದಿಯೂ ಸತ್ಯ ಹರಿಶ್ಚಂದ್ರರಲ್ಲ ಎಂದು ಹೇಳಿದ್ದಾರೆ.
ಇವರ ಮೇಲೆ ತೂಗುಗತ್ತಿ ಇದೆ ಅನ್ನುವ ಕಾರಣಕ್ಕಾಗಿ, ಇವರ ಬಗ್ಗೆ ಸಿಡಿಗಳಿಗೆ ಅನ್ನುವ ಆತಂಕವಿದ್ರೆ ಎಲ್ಲರನ್ನೂ ಸೇರಿಸಿ ಹೇಳುವುದಲ್ಲ.
ಮರ್ಯಾದೆ ಇರುವವರು ಯಾರು ಕೂಡಾ ಇಂತ ಮಾತು ಕೇಳಲು ತಯಾರಿಲ್ಲ. ಹೀಗಾಗಿ ಎಲ್ಲರ ಬಗ್ಗೆಯೂ ತನಿಖೆಯಾಗಲಿ, ಸುಧಾಕರ್ ಮೇಲೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಈ ವೇಳೆ ಎದ್ದು ನಿಂತ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರಿಸಲು ಮುಂದಾದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಬಸವರಾಜ್ ಎಲ್ಲರೂ ವ್ಯಭಿಚಾರಿಗಳ…225 ಮಂದಿಯೂ ವ್ಯಭಿಚಾರಿಗಳ ಎಂದು ಏರು ದನಿಯಲ್ಲಿ ಗುಡುಗಿದರು. ಜೊತೆಗೆ ಇದು ವ್ಯಭಿಚಾರಿಗಳ ಸರ್ಕಾರವೇ ಇದು ಎಂದು ಪ್ರಶ್ನಿಸಿದರು.
Discussion about this post