ಮೈಸೂರು : ಜೆಡಿಎಸ್ ನಾಯಕರಿಗೆ ಪರಸ್ಪರ ಪ್ರತಿಷ್ಠೆಯಾಗಿ ಪರಿಣಮಿಸಿದ್ದ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಮುಖಭಂಗ ಅನುಭವಿಸಿದೆ.
ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಜಿಟಿಡಿ ಹಣ ಗೆದ್ದುಕೊಂಡ್ರೆ, 3 ಸ್ಥಾನಗಳಲ್ಲಿ ಗೆಲುವು ಕಾಣುವ ಮೂಲಕ ತೃಪ್ತಿ ಪಟ್ಟುಕೊಂಡಿದೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ಸಂಬಂಧಿಯಾಗಿರುವ ಕೆ ಎಸ್ ಮಧುಚಂದ್ರ ಕೂಡಾ ಸೋಲು ಕಂಡಿದ್ದಾರೆ. ಇವರು ಭವಾನಿ ರೇವಣ್ಣ ಅವರ ಸಹೋದರರಾಗಿದ್ದಾರೆ.
ಮೈಸೂರು ವಿಭಾಗದ 7 ಮತ್ತು ಹುಣಸೂರು ಉಪ ವಿಭಾಗದ 8 ಸ್ಥಾನಗಳಿಗೆ ಈ ಚುನಾವಣೆ ನಡೆದಿದ್ದು, ಕೆ ಆರ್ ನಗರ ತಾಲೂಕಿನಿಂದ ಕೆ ಎಸ್ ಮಧುಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಕೆ. ಗೋವಿಂದೇಗೌಡ ಅವರ ಪತ್ನಿ ರಾಣಿ, ಹುಣಸೂರು ತಾಲೂಕಿನಿಂದ ರುದ್ರೇಗೌಡ, ಪಿರಿಯಾಪಟ್ಟಣ ತಾಲೂಕಿನಿಂದ ಬಿಎ ಶಿವಪ್ರಕಾಶ್, ಶಿವಣ್ಣ, ಪುಷ್ಪಲತಾ, ಹಾಗೂ ಎಚ್.ಡಿ. ಕೋಟೆ ತಾಲೂಕಿನಿಂದ ಬಸವಣ್ಣ ಜೆಡಿಎಸ್ ಬೆಂಬಲದಿಂದ ಸ್ಪರ್ಧಿಸಿದ್ದರು.
Discussion about this post