ಬೆಂಗಳೂರು : ಹಳ್ಳಿ ಖ್ಯಾತಿಯ ವಿಶ್ವನಾಥ್ ಅವರ ರಾಜಕೀಯ ಭವಿಷ್ಯ ಬಹುತೇಕ ಮುಕ್ತಾಯವಾದಂತೆ. ಇವತ್ತು ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪು ಅವರ ಸಚಿವ ಸ್ಥಾನಕ್ಕೆ ಸಂಬಂಧಪಟ್ಟಿದ್ದು, ಆದರೂ ಅವರ ರಾಜಕೀಯ ಜೀವನಕ್ಕೆ ಇದು ಪೂರ್ಣ ವಿರಾಮವಿಟ್ಟಂತೆ ಕಾಣಿಸುತ್ತಿದೆ.
ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ ನಾಯಕ ಎಚ್. ವಿಶ್ವನಾಥ್ಗೆ ಭಾರಿ ಮುಖಭಂಗವಾಗಿದ್ದು, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಈ ಮೂಲಕ ಸಚಿವನಾಗುವ ಕನಸು ಕಂಡಿದ್ದ ವಿಶ್ವನಾಥ್ ಅವರಿಗೆ ನಿರಾಶೆಯಾಗಿದೆ.
ವಿಶ್ವನಾಥ್ ಮತ್ತೆ ಸಚಿವರಾಗಬೇಕಾದರೆ ವಿಧಾನಸಭೆ ಅಥವಾ ಪರಿಷತ್ ಗೆ ಚುನಾವಣೆಯಲ್ಲಿ ಗೆದ್ದು ಬರಬೇಕಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆಗಳಿಲ್ಲ. ಮುಂದೆ ಚುನಾವಣೆ ನಡೆದರೂ ಮೂರು ಪಕ್ಷಗಳು ಕೂಡಾ ಅವರಿಗೂ ಟಿಕೆಟ್ ಕೊಡುವ ಸಾಧ್ಯತೆಗಳಿಲ್ಲ.
ಇನ್ನು ವಿಶ್ವನಾಥ್ ಪದೇ ಪದೇ ಖ್ಯಾತೆ ತೆಗೆಯುತ್ತಾರೆ, ಒಂದು ಪಕ್ಷ ನೆಲೆ ನಿಲ್ಲೋದಿಲ್ಲ ಅನ್ನುವ ಕಾರಣಕ್ಕೆ ಅವರನ್ನು ಪರಿಷತ್ ಚುನಾವಣೆಗೂ ಯಾವ ಪಕ್ಷಗಳು ನಿಲ್ಲಿಸುವ ಆಸಕ್ತಿ ತೋರಿಸೋದು ಕಷ್ಟ.
ಈ ನಡುವೆ ಸುಪ್ರೀಂ ತೀರ್ಪು ಕುರಿತಂತೆ ಪ್ರತಿಕ್ರಿಯಿಸಿರುವ ವಿಶ್ವನಾಥ್ ನಾನು ಸಚಿವಾಗಲು ಬಿಜೆಪಿ ಬಂದಿಲ್ಲ. ನಾನು ಸಚಿವ ಆಗುವುದನ್ನು ತಡೆಯೋ ಪ್ರಯತ್ನ ನಡೆಯುತ್ತಿದೆ ಹೀಗಾಗಿ ಪರಿಷತ್ ಸದಸ್ಯನಾಗಿಯೇ ಮುಂದುವರೆಯುತ್ತೇನೆ ಅಂದಿದ್ದಾರೆ
Discussion about this post