ಹಲವು ವರ್ಷಗಳ ರಾಜ್ಯಶಾಸ್ತ್ರದ ಪಾಠ ಮಾಡಿದ್ದ ಜಯಪ್ರಕಾಶ ಮಾವಿನಕುಳಿಯವರು, ವಿಧಾನ ಪರಿಷತ್ತಿನ ಗಲಾಟೆ ನೋಡಿ ನನಗೆ ನಾಚಿಕೆಯಾಗಿದೆ, 33 ವರ್ಷ ರಾಜ್ಯ ಶಾಸ್ತ್ರದ ಪಾಠ ಮಾಡಿದೆನಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಾಗೇ ಬರೆಯುವುದಕ್ಕೂ ಕಾರಣವಿದೆ, ರಾಜ್ಯಶಾಸ್ತ್ರದ ಪಠ್ಯದಲ್ಲಿ, ವಿಧಾನ ಪರಿಷತ್, ಸಭಾಪತಿ, ಸದಸ್ಯರು ಅವರಿಗಿರುವ ಗೌರವ ಎಲ್ಲವನ್ನೂ ಅದ್ಭುತವಾಗಿ ವಿವರಿಸಲಾಗಿದೆ.
ಆದರೆ ಇಂದು ಮೇಲ್ಮನೆ ಎಂದು ವಿಧಾನ ಪರಿಷತ್ ನಲ್ಲಿ ಸದಸ್ಯರು ಕಿತ್ತಾಡಿದ ರೀತಿ ನೋಡಿದರೆ ಪಠ್ಯ ಪುಸ್ತಕದಲ್ಲಿ ಬರೀ ಸುಳ್ಳು ಬರೆದಿದ್ದಾರೆ ಎಂದು ಅನ್ನಿಸದಿರದು.
ಇವತ್ತು ನಡೆದ ಮಾರಾಮಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಸದಸ್ಯರ ತಪ್ಪುಗಳಿದ್ರೆ, ಅಲ್ಲಿ ಕ್ಷಣ ಕ್ಷಣಕ್ಕೂ ನಡೆದ ಘಟನೆಗಳಿಗೆ ಎರಡೂ ಪಕ್ಷದ ಸದಸ್ಯರೇ ಹೊಣೆಗಾರರು, ಯಾಕಂದ್ರೆ ಹೊಣೆಗಾರಿಕೆ ಅನ್ನುವುದನ್ನು ಎಲ್ಲರೂ ಮರೆತಿದ್ದರು.
ಬೊಕ್ಕಸದ ಹಣ ಖರ್ಚು ಮಾಡಿದ್ದ ವಸ್ತುಗಳನ್ನು ಹಾನಿ ಮಾಡುವ ಮಟ್ಟಕ್ಕೆ ಇವರು ಹೋಗಿದ್ದಾರೆ ಅಂದ್ರೆ, ಇವನ ಮನೆಯ ಆಸ್ತಿಯನ್ನು ಹೀಗೆ ಹಾಳು ಮಾಡುತ್ತಿದ್ರು, ಬಾಗಿಲುಗಳಿಗೆ ಒದೆಯುವ ಸದಸ್ಯರು ತಮ್ಮ ಮನೆಯ ಬಾಗಿಲಿಗೆ ಹೋಗಿ ಒದೆಯುವ ಎದೆಗಾರಿಕೆ ತೋರಿಸಲಿ.
Discussion about this post