ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಸರ್ಕಾರಿ ನೌಕರರು ಹವಾಯಿ ಚಪ್ಪಲಿ ಧರಿಸುವಂತಿಲ್ಲ. ಇಂತಹುದೊಂದು ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ನೂತನ ವಸ್ತ್ರಸಂಹಿತೆ ಭಾಗವಾಗಿ ಈ ಆದೇಶ ಜಾರಿಯಾಗಿದ್ದು, ಮಹಾರಾಷ್ಟ್ರ ರಾಜ್ಯ ಸರ್ಕಾರ ತನ್ನ ನೌಕರರಿಗೆ ಹೊಸ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿದೆ.
ಹೊಸ ವಸ್ತ್ರ ಸಂಹಿತೆ ಪ್ರಕಾರ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಹಾಗೂ ಹವಾಯಿ ಚಪ್ಪಲಿ ಧರಿಸುವಂತಿಲ್ಲ. ಮಹಿಳೆಯರು ಸೀರೆ, ಸಲ್ವಾರ್, ಚೂಡಿದಾರ್,ಕುರ್ತಾ, ಪ್ಯಾಂಟ್, ಹಾಗೂ ಶರ್ಟ್ ನೊಂದಿಗೆ ಶಾಲು ಪುರುಷರು ಪ್ಯಾಂಟ್, ಶರ್ಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಚಪ್ಪಲಿ ಅಥವಾ ಶೂ ಧರಿಸುವುದು ಕಡ್ಡಾಯ.
ಇನ್ನು ಕನಿಷ್ಠ ಶುಕ್ರವಾರದಂದು ಖಾದಿ ಬಟ್ಟೆ ಧರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
Discussion about this post