ಈ ಜಗತ್ತಿನಲ್ಲಿ ಶ್ರೀಮಂತರಿಗೆ ಇರೋ ಕೊಬ್ಬು ಮತ್ಯಾರಿಗೂ ಇಲ್ಲ ಅನ್ನುವುದು ಸ್ಪಷ್ಟ. ಕಾಸಿನ ಕೊಬ್ಬು ಏರಿದವರ ದರ್ಬಾರುಗಳನ್ನು ಕೇಳುವುದೇ ಬೇಡ.
ಇಂದೋರ್ ನಲ್ಲಿ ವ್ಯಕ್ತಿಯೊಬ್ಬ ದುಬಾರಿ ಕಾರ್ ನಲ್ಲಿ ರೌಂಡ್ಸ್ ಬಂದಿದ್ದಾನೆ. ಬೇರೆ ಸಂದರ್ಭದಲ್ಲಿ ಆಗಿದ್ರೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲಯ ದೇಶವೇ ಕೊರೋನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಶೋಕಿ ಮಾಡಲು ಬಂದವರು ಸಿಕ್ರೆ ಪೊಲೀಸರು ಬಿಡ್ತಾರ.
20 ವರ್ಷದ ಪುತ್ರ ಹಳದಿ ಬಣ್ಣದ ಓಪನ್ ಪೋರ್ಷೆ ಕಾರಿನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದ. ಇದನ್ನು ಕಂಡ ಅಧಿಕಾರಿಗಳು ಆತನನ್ನು ಅಡ್ಡಗಟ್ಟಿದ್ದಾರೆ. ನಂತರ ಕಿವಿಯನ್ನು ಕೈಯಲ್ಲಿ ಹಿಡಿದು ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ.
ಪೊಲೀಸರ ಮುಂದೆ ಬಸ್ಕಿ ಹೊಡೆದು ಬಳಿಕ ಮನೆ ಸೇರಿದ್ದಾನೆ. ಮನೆಗೆ ಹೋದ ಮೇಲೆ ಮಗನಿಗೆ ತಂದೆ ಬುದ್ದಿ ಹೇಳಬೇಕು ತಾನೇ ಅದನ್ನು ಬಿಟ್ಟು ಪೊಲೀಸರ ಮೇಲೆಯೇ ಅಪ್ಪ ಎಗರಾಡಿದ್ದಾನೆ.
ನನ್ನ ಮಗನ ಬಳಿ ಕಾರಿನ ದಾಖಲೆಯಿತ್ತು. ಅವನ ಬಳಿ ಲಾಕ್ಡೌನ್ ಸಂದರ್ಭದಲ್ಲಿ ಹೊರಗೆ ಹೋಗಲು ಪಾಸ್ ಕೂಡ ಇತ್ತು. ಆದರೂ ಪೊಲೀಸರು ಕರ್ತವ್ಯದ ನೆಪದಲ್ಲಿ ದರ್ಪ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಪಾಸ್ ಇರೋದು ಅಗತ್ಯ ಮತ್ತು ತುರ್ತು ಸಂದರ್ಭದ ಬಳಕೆಗೆ ಅನ್ನುವುದು ಈ ಪಾಪಿ ತಂದೆಗೆ ಗೊತ್ತಿಲ್ಲ.
ಅಂದ ಹಾಗೇ ಇಂದೋರ್ ನಲ್ಲಿ ಇರುವ ಆಶಾ ಮಿಠಾಯಿ ಕಂಪನಿಯ ಮಾಲೀಕ ದೀಪಕ್ ದರ್ಯಾನಿಯ ಪುತ್ರನಂತೆ ಈ ಶೋಕಿವಾಲ.
Discussion about this post