ಉಡುಪಿ : ಕೊರೋನಾ ವಿರುದ್ಧ ಕರುನಾಡಿನ ಸಮರದಲ್ಲಿ ವಿಲನ್ ಗಳಾಗಿ ಕಾಣಿಸಿಕೊಂಡವರು ಕ್ವಾರಂಟೈನ್ ನಲ್ಲಿದ್ದ ಕೆಲ ಮಂದಿ.
ಭಾರತದ ಪರಿಸ್ಥಿತಿಯಲ್ಲಿ ವಿದೇಶದಿಂದ ಬಂದ ಎಲ್ಲರನ್ನೂ ಸರ್ಕಾರವೇ ಕ್ವಾರಂಟೈನ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕೊರೋನಾ ವಿಚಾರದಲ್ಲಿ ಆತಂಕವಿಲ್ಲದ ಮಂದಿಗೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವಂತೆ ಮನವಿ ಮಾಡಲಾಗಿತ್ತು.
ದೇಶದ ಬಗ್ಗೆ ಕಾಳಜಿಯುಳ್ಳ ಮಂದಿ 14 ದಿನ ಸ್ವಯಂ ಗೃಹಬಂಧನಕ್ಕೆ ಒಳಗಾದರು. ಆದರೆ ದೇಶದ ಬಗ್ಗೆ ಕಾಳಜಿ ಇಲ್ಲದ ಮಂದಿ ಊರೆಲ್ಲಾ ಸುತ್ತಾಡಿದರು. ಸುತ್ತಾಡಿದ್ರೆ ಪರವಾಗಿರಲಿಲ್ಲ, ಊರ ಮಂದಿಗೆಲ್ಲಾ ರೋಗ ಹಂಚಿದ್ರು. ತಪ್ಪೇ ಮಾಡದ ಮಂದಿ ಆಸ್ಪತ್ರೆ ಸೇರುವಂತಾಯ್ತು.
ಇದೀಗ ಹೀಗೆ ಊರಿಗೆಲ್ಲಾ ರೋಗಾಸುರನನ್ನು ಹರಡಿದ ಮಂದಿಗೆ ತಕ್ಕ ಪಾಠ ಕಲಿಸಲು ಉಡುಪಿ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಉಡಾಫೆಯಿಂದ ಬೇಸರಗೊಂಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲಾ ಕಡೆ ಓಡಾಡಿದ್ದಾನೆ. ಕ್ವಾರಂಟೈನ್ನ ಸೂಚನೆ ನೀಡಿದ್ದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿದ್ದಾನೆ. ಹೀಗಾಗಿ ಅವನಿಂದ ಆಗಿರುವ ಅನಾಹುತಕ್ಕೆ ಆತನಿಂದಲೇ ವೆಚ್ಚ ವಸೂಲಿ ಮಾಡುತ್ತೇನೆ ಎಂದು ಡಿಸಿ ಗುಡುಗಿದ್ದಾರೆ.
ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಜೊತೆಗೆ ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕೇವಲ ಆತನಿಂದ ಮಾತ್ರವಲ್ಲ ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಗೂ ಇದು ಅನ್ವಯಿಸಲಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಈವರೆಗೆ ಕ್ವಾರಂಟೈನ್ ಉಲ್ಲಂಘಿಸಿದ ಕಾರಣ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾಧಿಕಾರಿಯ ಈ ನಿರ್ಧಾರಕ್ಕೆ ಚಪ್ಪಾಳೆ ತಟ್ಟಲೇಬೇಕು. ಬೇರೆ ಜಿಲ್ಲೆಗಳ ಜಿಲ್ಲಾಧಿಕಾರಿಗು ಕೂಡಾ ಹೀಗೆ ಮಾಡಬೇಕು. ಅಷ್ಟು ಮಾತ್ರವಲ್ಲ ಅವನ ಹಾಗೂ ಆತನ ಹೆತ್ತವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಗ ಫಾರಿನ್ ದುಡ್ಡಿನ ಮದ ತನ್ನಿಂತಾನೇ ಇಳಿಯುತ್ತದೆ.
Discussion about this post