ಬೆಂಗಳೂರು : ಕೊರೋನಾ ಎಂಬ ಮಹಾಮಾರಿಯನ್ನು ಮಣಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಇದೀಗ ಲಾಕ್ ಡೌನ್ ಘೋಷಿಸಲಾಗಿದೆ.
ಲಾಕ್ ಡೌನ್ ಕಾರಣದಿಂದ ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಆಡಳಿತಾತ್ಮಕ ವಿಚಾರಗಳು, ವ್ಯವಹಾರಗಳು ಲಾಕ್ ಡೌನ್ ನಡುವೆಯೂ ಅದರ ಪಾಡಿಗೆ ಸಾಗುತ್ತಿದೆ.
ಇದೀಗ ಮಾರ್ಚ್ ವರ್ಷ ಅಂತ್ಯಗೊಂಡಿದ್ದು, ಏಪ್ರಿಲ್ 1 ಕಾಲಿಟ್ಟಿದೆ. ಅಂದ್ರೆ ಹೊಸ ಆರ್ಥಿಕ ವರ್ಷ ಪ್ರಾರಂಭಗೊಂಡಿದೆ.
ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಜೆಟ್ನಲ್ಲಿ ಘೋಷಿಸಿದ ಎಲ್ಲಾ ಆರ್ಥಿಕ ಯೋಜನೆಗಳು ಏಪ್ರಿಲ್ 1 ರಿಂದ ಜಾರಿಗೆ ಬರುತ್ತಿದೆ. ಅದರಲ್ಲಿ ಮದ್ಯದ ದರ ಏರಿಕೆಯೂ ಸೇರಿದೆ.
ಬಜೆಟ್ ಸಂದರ್ಭದಲ್ಲಿ ಅಬಕಾರಿ ಸುಂಕವನ್ನು ಎಲ್ಲಾ ಸ್ಲ್ಯಾಬ್ಗಳ ಮೇಲೆ ಶೇ.6 ರಷ್ಟು ಹೆಚ್ಚಳ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದ್ದರು.
ಈ ಮೂಲಕ ಮದ್ಯ ಸಿಗದಿದ್ದರೂ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಹೀಗಾಗಿ ಬುಧವಾರದಿಂದ ಮದ್ಯದ ಬೆಲೆ ಏರಿಕೆಯಾಗಲಿದೆ.
Discussion about this post