ಕೊರೋನಾ ಭೀತಿಯ ನಡುವೆ ಈಗಾಗಲೇ ಕೈಗೊಳ್ಳಲಾಗಿರುವ ಕೇಂದ್ರ ಸರ್ಕಾರದ ನಿರ್ಧಾರಗಳು ಅದರ ಪಾಡಿಗೆ ಜಾರಿಯಾಗುತ್ತಿದೆ. ಆ ಪೈಕಿ ಕೆಲವೇ ಗಂಟೆಗಳಲ್ಲಿ ಜಾರಿಯಾಗಲಿರುವ ನಿರ್ಧಾರ ಅಂದ್ರೆ ಬ್ಯಾಂಕ್ ಗಳ ವಿಲೀನ.
ಪೂರ್ವ ನಿರ್ಧಾರದಂತೆ ಕರ್ನಾಟಕ ಮೂಲದ ಒಟ್ಟು ನಾಲ್ಕು ಬ್ಯಾಂಕ್ಗಳು ಇತಿಹಾಸದ ಪುಟ ಸೇರಲಿವೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕ್ ಕಣ್ಮರೆಯಾಗಿದ್ದು, ಇದೀಗ ಈ ಸಾಲಿಗೆ ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸೇರಲಿದೆ.
ಕಳೆದ ವರ್ಷ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿತ್ತು. ಎಸ್ಬಿಐನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಐದು ಸಹವರ್ತಿ ಬ್ಯಾಂಕ್ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗಿತ್ತು.
ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಕೆನರಾ ಬ್ಯಾಂಕ್ನಲ್ಲಿ ಸಿಂಡಿಕೇಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ನಲ್ಲಿ ಅಲಹಾಬಾದ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರಾ ಬ್ಯಾಂಕ್ ವಿಲೀನಗೊಳ್ಳಲಿದೆ.
ಏಪ್ರಿಲ್1 ರಂದು ಈ ವಿಲೀನ ಪ್ರಕ್ರಿಯೆ ನಡೆಯಲಿದೆ.
Discussion about this post