ಗಾಂಧಿ, ನೆಹರು ಕಾಲ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಅನ್ನುವುದನ್ನು ಸನ್ನೆಯ ಮೂಲಕ ಹೇಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿರುವ ರಮೇಶ್ ಕುಮಾರ್ ನೀವು ಸತ್ತರೂ ಪರವಾಗಿಲ್ಲ ನಾನು ಬದುಕಿರಬೇಕು ಅನ್ನುವ ಕಾಂಗ್ರೆಸ್ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದೀಗ ರಮೇಶ್ ಕುಮಾರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಹಲವು ಸಲ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ,ಸಚಿವರಾಗಿ, ಸ್ಪೀಕರ್ ಕೆಲಸ ಮಾಡಿ, ಇಂದಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಹೇಳೋದು ಎಷ್ಟರ ಮಟ್ಟಿಗೆ ಸರಿ ಎಂದು ಅವರದ ಪಕ್ಷದ ನಾಯಕರೇ ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದುಕೊಂಡು ಇಂತ ಹೇಳಿಕೆ ನೀಡೋ ಬದಲು ಪಕ್ಷವನ್ನು ಬಿಟ್ಟು ಹೋಗಬಹುದಲ್ವ. ಅದು ಅಸಾಧ್ಯವಾದರೆ ಕೆಟ್ಟಿರುವ ಪಕ್ಷವನ್ನು ಶುದ್ಧೀಕರಣ ಮಾಡಬಹುದಲ್ವ ಅನ್ನುವ ಪ್ರಶ್ನೆಗಳು ಬರಲಾರಂಭಿಸಿದೆ.
ಇನ್ನು ರಮೇಶ್ ಕುಮಾರ್ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ತಿನ್ನುವ ಕಾಂಗ್ರೆಸ್ನ ಶಾಸಕರಾಗಿ ಯಾಕಿದ್ದೀರಿ, ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಅಂದಿದ್ದಾರೆ.
Discussion about this post