ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಫೆಬ್ರವರಿ 5 ರಂದು ನಿತ್ಯಾನಂದನ ಭವಿಷ್ಯವನ್ನು ಹೈಕೋರ್ಟ್ ನಿರ್ಧರಿಸಲಿದೆ.
ಜಾಮೀನು ರದ್ದು ಕೋರಿ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಪೀಠ ತೀರ್ಪನ್ನು ಇದೇ ತಿಂಗಳ 5ಕ್ಕೆ ಕಾಯ್ದಿರಿಸಿದೆ.
ಇದಕ್ಕೂ ಮುನ್ನ ನಿತ್ಯಾನಂದನಿಗೆ ಜಾರಿ ಮಾಡಲಾಗಿರುನ ನೋಟಿಸ್ ಗಳನ್ನು ತಲುಪಿಸಲಾಗದ ಪರಿಸ್ಥಿತಿ ಕುರಿತಂತೆ ವಿವರಣೆ ಸಲ್ಲಿಸಿದ ರಾಮನಗರ ಪೊಲೀಸರು, ಕೋರ್ಟ್ ನೀಡಿದ ನೋಟಿಸ್ ಗಳನ್ನು ನಿತ್ಯಾನಂದ ಸ್ವಾಮೀಜಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ನೋಟಿಸ್ ಗಳನ್ನು ಅವರ ಸಹವರ್ತಿ ಕುಮಾರಿ ಅರ್ಚನಾನಂದರಿಗೆ ನೀಡಿದ್ದೇವೆ. ಸದ್ಯ ನಿತ್ಯಾನಂದ ಸ್ವಾಮೀಜಿ ಬಿಡದಿ ಆಶ್ರಮದಲ್ಲಿ ಲಭ್ಯವಿಲ್ಲ. ಅವರು ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಮಾರಿ ಅರ್ಚನಾನಂದರಿಗೆ ಈ ನೋಟಿಸ್ ನೀಡಲಾಗಿದೆ.ಸದ್ಯ ನಿತ್ಯಾನಂದ ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಹೀಗಾಗಿ ನಿತ್ಯಾನಂದರಿಗೆ ನೋಟಿಸ್ ತಲುಪಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಾವು ನೋಟಿಸ್ ಸ್ವೀಕರಿಸುವಂತೆ ಹಲವು ಬಾರಿ ಬಲವಂತ ಮಾಡಿದ್ದೇವೆ. ಕುಮಾರಿ ಅರ್ಚನಾನಂದ ಕೂಡ ನಿತ್ಯಾನಂದ ಸ್ವಾಮೀಜಿಗೆ ತಿಳಿಸಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ ಎಂದು ಪೊಲೀಸರು ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಪೊಲೀಸರ ಅಫಿಡವಿಟ್ ಅಂಶಗಳಿಂದ ಗರಂ ನ್ಯಾಯಮೂರ್ತಿಗಳು ಒಂದು ಹಂತದಲ್ಲಿ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಲೆನಿನ್ ಪರ ವಾದ ಮಂಡಿಸಿದ ವಕೀಲರು ಬೆಲ್ಲೀಸ್ ದೇಶದ ಪಾಸ್ ಪೋರ್ಟ್ ಪಡೆದು ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿದ್ದಾನೆ. ಈವರೆಗೂ ಕೋರ್ಟ್ಗೆ ಹಾಜರಾಗಿಲ್ಲ. ನಿತ್ಯಾನಂದನ ಪಾಸ್ ಪೋರ್ಟ್ ಅವಧಿ ಮುಗಿದಿದೆ. ಆದರೂ, ನಿತ್ಯಾನಂದ ಬೇರೆ ದೇಶದಲ್ಲಿದ್ದಾನೆ. 2ನೇ ಆರೋಪಿಯೂ ಸಹ ಕೋರ್ಟ್ಗೆ ಹಾಜರಾಗುತ್ತಿಲ್ಲ. ಹೈಕೋರ್ಟ್ ನೀಡಿರುವ ಸಮನ್ಸ್ ಅಚಲಾನಂದ ಸ್ವೀಕಾರ ಮಾಡಿದ್ದಾರೆ. ಆದ್ದರಿಂದ ಜಾಮೀನು ರದ್ದು ಪಡಿಸಬೇಕು ಅಂತಾ ಲೆನಿನ್ ಪರ ವಕೀಲರು ವಾದಿಸಿದರು.
ಕೊನೆಗೆ ತೀರ್ಪನ್ನು ಕಾಯ್ದಿರಿಸಲಾಯ್ತು.
Discussion about this post