ಎಷ್ಟು ಜನರಿಗೆ ಗೊತ್ತಿದೆಯೋ ಇಲ್ಲವೋ, NRC ಮತ್ತು CAA ವಿರೋಧಿಸಿ ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು.
ಆದರೆ ಇವತ್ತಿನ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಯಾರೂ ಕ್ಯಾರೇ ಅಂದಿಲ್ಲ. ಬಹುತೇಕರಿಗೆ ಭಾರತ್ ಬಂದ್ ಇದೆ ಎಂದು ಗೊತ್ತಿರಲಿಲ್ಲ. ಹೀಗಾಗಿ NRC ಮತ್ತು CAA ವಿರೋಧಿಸಿ ಕರೆ ನೀಡಿದ್ದ ಬಂದ್ ಕರ್ನಾಟಕದಲ್ಲಿ ಠುಸ್ ಪಟಾಕಿಯಾಗಿದೆ.
ಇನ್ನು ಚಿಕ್ಕಮಗಳೂರು ನಗರದಲ್ಲಿ ಬಂದ್ ಪ್ರಯುಕ್ತ ಮುಸ್ಲಿಂ ಸಮುದಾಯದವರ ಮಾಲೀಕತ್ವದ ಕೆಲ ಅಂಗಡಿಗಳು ಮತ್ತು ನಾಲ್ಕು ಶಾಲೆಗಳು ಬಾಗಿಲು ಹಾಕಿತ್ತು.
ಯುನೈಟೆಡ್, ಸನ್ರೈಸ್, ಕೇಂಬ್ರಿಡ್ಜ್ ಮತ್ತು ವಿದ್ಯಾಭಾರತಿ ಶಾಲೆಗಳಿಗೆ ಬಂದ್ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು.
ಅಂದ ಹಾಗೇ ಬಹುಜನ ಕ್ರಾಂತಿ ಮೋರ್ಚಾ ಹೆಸರಿನಲ್ಲಿ ಭಾರತ್ ಬಂದ್ಗೆ ಕರೆ ನೀಡಲಾಗಿತ್ತು.
ಇನ್ನು ಪಶ್ಚಿಮ ಬಂಗಾಳದಲ್ಲಿ ಭಾರತ್ ಬಂದ್ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಕಚ್ಚಾಬಾಂಬ್ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುರ್ಶಿದ್ ಬಾದ್ ಜಿಲ್ಲೆಯಲ್ಲಿ ನಡೆದಿದೆ.
Discussion about this post