ಯಡಿಯೂರಪ್ಪ ಅವರೂ ಯಾಕಾದ್ರೂ ಮುಖ್ಯಮಂತ್ರಿಯಾದರೋ ಪಾಪ. ಮೈತ್ರಿ ಸರ್ಕಾರವೇ ಸಿದ್ದರಾಮಯ್ಯ ಕುಮಾರಸ್ವಾಮಿ ನಡುವಿನ ಹಗ್ಗ ಜಗ್ಗಾಟದಲ್ಲಿ ಹೇಗೋ ನಡೆಯುತಿತ್ತು.
ಅತ್ತ ಮೈತ್ರಿ ಸರ್ಕಾರ ಕೆಡವಲೆಂದೇ ಅಧಿಕಾರ ಅಸೆಯಿಂದ ಬಿಜೆಪಿಗೆ ಬಂದವರ ಪರಿಸ್ಥಿತಿ ಇದೀಗ ಆಯೋಮಯ. ಮಂತ್ರಿಯಾಗ್ತೀವಿ, ಜೀವಮಾನದಲ್ಲಿ ಒಂದ್ಸಲ ಬರೋ ಅವಕಾಶವನ್ನು ಕಳೆದುಕೊಳ್ಳುವುದ್ಯಾಕೆ ಎಂದು ಕಮಲ ಪಾಳಯ ಸೇರಿದವರು ಇದೀಗ ಮಂತ್ರಿಯ ಕನಸು ಕಾಣುವಂತಾಗಿದೆ.
ಮತ್ತೊಂದು ಕಡೆ ಉಪಮುಖ್ಯಮಂತ್ರಿಯಾಗ್ತೀನಿ ಅನ್ನುವ ಒಂದೇ ಕಾರಣಕ್ಕೆ ಮಿತ್ರ ಮಂಡಳಿ ಕಟ್ಟಿದ್ದ ರಮೇಶ್ ಜಾರಕಿಹೊಳಿ ಇದೀಗ ಸಚಿವರಾದರೆ ಸಾಕು, ಡಿಸಿಎಂ ಸೈಡಿಗಿರಲಿ ಅನ್ನುವ ಪರಿಸ್ಥಿತಿ ತಲುಪಿದ್ದಾರೆ.
ಇದಕ್ಕೆ ಪೂರಕ ಅನ್ನುವಂತೆ ನಮ್ಮ ಸಂಪುಟದಲ್ಲಿ ಮೂರೇ ಉಪ ಮುಖ್ಯಮಂತ್ರಿಗಳಿರುತ್ತಾರೆ ಅನ್ನುವ ಮೂಲಕ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಡಿಸಿಎಂ ಕನಸಿಗೆ ತಣ್ಣೀರು ಎರಚಿದ್ದಾರೆ.
ಮತ್ತೊಂದು ಕಡೆ ಡಿಸಿಎಂ ಹುದ್ದೆಯಲ್ಲಿದ್ದ ಶ್ರೀರಾಮುಲು ಕೂಡಾ ಈ ಹೇಳಿಕೆಯಿಂದ ನಿರಾಶೆ ಅನುಭವಿಸುವಂತಾಗಿದೆ. ಬಿಜೆಪಿ ಸರ್ಕಾರ ಬಂದರೆ ಅವರೇ ಡಿಸಿಎಂ ಎಂದು ಬಹಿರಂಗವಾಗಿ ಘೋಷಿಸಲಾಗಿತ್ತು. ಆದರೆ ಆಗ ಮೈತ್ರಿ ಸರ್ಕಾರ ರಚನೆಯಾಗಿತ್ತು. ಹೀಗಾಗಿ ಡಿಸಿಎಂ ಭಾಗ್ಯ ಇಲ್ಲ ಎನ್ನಲಾಗಿದೆ.
Discussion about this post