ಮಂಗಳೂರು : ಎರಡು ಅಲೆಗಳಲ್ಲಿ ಅಬ್ಬರಿಸಿದ ಮೇಡ್ ಇನ್ ಚೈನಾ ವೈರಸ್ ಹಲವು ಕ್ಷೇತ್ರಗಳಲ್ಲಿ ಅಲ್ಲೋಲ ಕಲ್ಲೋಲ ಮಾಡಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದು, ಭವಿಷ್ಯದ ಆತಂಕ ಇನ್ನೂ ಕರಗಿಲ್ಲ. ಅದೆಷ್ಟೋ ಮಂದಿ ಬೆಂಗಳೂರು ಬಿಟ್ಟು ಊರು ಸೇರಿ ಕೃಷಿ ಕಡೆ ಮುಖ ಮಾಡಿದ್ದಾರೆ.
ಈ ನಡುವೆ ಶಿಕ್ಷಣ ವ್ಯವಸ್ಥೆಯ ಮೇಲೂ ಇದು ಗಂಭೀರ ಪರಿಣಾಮ ಬೀರಿದ್ದು, ಕೇವಲ ಶೈಕ್ಷಣಿಕ ವರ್ಷಗಳು ಅಡಿಮೇಲಾಗಿದ್ದು ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳೇ ಉಸಿರಾಡಲು ಪರದಾಡುವಂತಾಗಿದೆ. ಖಾಸಗಿ ಶಾಲೆಗಳ ಫೀಸ್ ಹೊರೆ ತಡೆಯಲಾಗದೆ ಅನೇಕರು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ.
ಇದೇ ಕಾರಣಕ್ಕಾಗಿ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ 16 ಪಿಯು ಕಾಲೇಜುಗಳು ಈ ಬಾರಿ ಒಂದೇ ಒಂದು ಹೊಸ ಆಡ್ಮಿಷನ್ ಪಡೆದುಕೊಂಡಿಲ್ಲ. ಈ ವರ್ಷ ದ್ವೀತಿಯ ಪಿಯು ವಿದ್ಯಾರ್ಥಿಗಳು ಹೊರಗೆ ಹೋದ್ರೆ ಈ ಕಾಲೇಜುಗಳು ಕೂಡಾ ಬಾಗಿಲು ಕೊಳ್ಳಬೇಕಾಗಿತ್ತದೆ. ಈ ಪೈಕಿ 6 ಪಿಯು ಕಾಲೇಜುಗಳು ಈಗಾಗಲೇ ಬಾಗಿಲು ಹಾಕಿವೆ. ಕಾಲೇಜು ನಡೆಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಪಿಯು ಇಲಾಖೆಗೆ ಲಿಖಿತವಾಗಿ ತಿಳಿಸಿದ್ದಾರೆ.
ಗಮನಾರ್ಹ ಅಂಶ ಅಂದ್ರೆ ಬಾಗಿಲು ಹಾಕಿದ 6 ಕಾಲೇಜುಗಳ ಪೈಕಿ ಮಂಗಳೂರು ನಗರದಲ್ಲಿ ಒಂದು ಕಾಲೇಜು ಹಾಗೂ ಉಳಿದಂತೆ ನಗರ ಹೊರವಲಯದ ಉಳ್ಳಾಲ, ನಡುಪದವು, ಅಡ್ಯಾರು ಕಿನ್ನಿಗೋಳಿ ಮತ್ತು ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಅಚ್ಚರಿ ಅಂದ್ರೆ ಕೋರೋನಾ ಕಾರಣದಿಂದ sslcಯ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಹೀಗಾಗಿ ಖಾಸಗಿ ಪಿಯು ಕಾಲೇಜುಗಳು ತುಂಬಿ ತುಳುಕುತ್ತವೆ ಅನ್ನಲಾಗಿತ್ತು. ಆದರೆ ಕೆಲವೇ ಕೆಲವು ಸಾವಿರ ವಿದ್ಯಾರ್ಥಿಗಳು ಖಾಸಗಿ ಪಿಯುಸಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಬಹುತೇಕರು ಸರ್ಕಾರಿ ಪಿಯು ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಇನ್ನು ಕೆಲವರು ವೃತ್ತಿಪರ ಕೋರ್ಸ್ ಗಳಿಗೆ ಆಸಕ್ತಿ ತೋರಿದ್ದಾರೆ.
Discussion about this post