ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಅತ್ಯಾಚಾರ ಪ್ರಕರಣ ನಿನ್ನೆ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕೆಲ ಮಾಧ್ಯಮಗಳು ರೋಚಕವಾಗಿ ಸುದ್ದಿ ಪ್ರಸಾರ ಮಾಡಿತ್ತು.
ಮೈಸೂರಿನ ಆರ್.ಎಸ್.ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿಹೌಸ್ನ ನಡೆದ ಘಟನೆ ಮಸಾಲೆ ಸೇರಿಸಿ. ಯುವತಿ ಒಂಟಿಯಾಗಿದ್ದ ವೇಳೆ ಕಾಮುಕ ಮೈ ಮೇಲೆ ಎರಗಿದ್ದಾನೆ, ಜೊತೆಗೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿತ್ತು. ಆದರೆ ಇದೀಗ ಅಸಲಿ ಸತ್ಯ ಬಯಲಾಗಿದ್ದು, ಇದೊಂದು ಹಾಸ್ಟೆಲ್ ಕರ್ಮಕಾಂಡ ಎಂದು ಗೊತ್ತಾಗಿದೆ.
ಯುವತಿ ದೂರು ದಾಖಲಿಸುತ್ತಿದ್ದಂತೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ಅದರಲ್ಲೂ ಯುವತಿಯ ನಡೆ ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಮುಂದೇನು ತೊಂದರೆಯಾಗುವುದು ಬೇಡ ಎಂದು ಆರೋಪಿಯನ್ನು ಕೂಡಾ ಬಂಧಿಸಿದ್ದರು.ಈ ನಡುವೆ ಯುವತಿಯ ಪೋನ್ ಕರೆ ಮೆಸೇಜ್ ಪರಿಶೀಲನೆ ಮಾಡಿದರೆ ಬಂಧಿತ ಯುವಕನೊಂದಿಗೆ ಆಕೆ ಸತತ ಸಂಪರ್ಕದಲ್ಲಿದ್ದಳು. ಹೀಗಾಗಿ ಅಸಲಿ ಕಹಾನಿಯ ಆಳಕ್ಕೆ ಇಳಿದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ.
ಮೈಸೂರಿನ ಸ್ಟಡಿ ಹೌಸ್ ನಲ್ಲಿದ್ದ ಆಂಧ್ರಪ್ರದೇಶ ಮೂಲದ ಏಳು ಮಂದಿ ತರಗತಿಗೆ ತೆರಳುತ್ತಿದ್ದಂತೆ. ದೂರುದಾರ ಯುವತಿ (28) 21 ವರ್ಷದ ತನ್ನ ಪ್ರಿಯತಮನನ್ನು ಹಾಸ್ಟೆಲ್ಗೆ ಬರಲು ಹೇಳಿದ್ದಳು. ಯಾರೂ ಇಲ್ಲದ ಕಾರಣ ಪ್ರೇಮಿಗಳು ಹಾಸ್ಟೆಲ್ ನಲ್ಲಿ ಜೊತೆಯಾಗಿದ್ದರು. ಆದರೆ ಇವರ ಗ್ರಹಚಾರ ಕೆಟ್ಟಿತ್ತು.ಸಹಪಾಠಿಗಳ ಕೈ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬುದ್ದಿವಂತಿಕೆ ಉಪಯೋಗಿಸಿದ ಯುವತಿ ಕ್ರೈಸ್ತ ಸಮುದಾಯದ ಹಿರಿಯರಿಗೆ ಗೊತ್ತಾದ್ರೆ ಕಷ್ಟ ಎಂದು ಪೊಲೀಸ್ ಕೇಸ್ ದಾಖಲಿಸಿದ್ದಾಳೆ.
ಈ ಬಗ್ಗೆ ಯುವಕನಿಗೂ ಯುವತಿ ಮಾಹಿತಿ ನೀಡಿದ್ದಳು. ನೀನು ತಪ್ಪಿಸಿಕೋ, ಅತ್ಯಾಚಾರದ ನಾಟಕವಾಡೋಣ ಎಂದು ಯೋಜನೆ ಬೇರೆ ಹೇಳಿಕೊಟ್ಟಿದ್ದಳು.ಆದರೆ ಪೊಲೀಸರು ದಡ್ಡರಲ್ಲ. ಒಮ್ಮೆ ಅತ್ಯಾಚಾರ ಆಗಿದೆ ಮತ್ತೊಮ್ಮೆ ಅತ್ಯಾಚಾರ ಯತ್ನ ಅಂದಾಗಲೇ ಅನುಮಾನ ಬಂದಿತ್ತು. ಹೀಗಾಗಿ ಮೊಬೈಲ್ ಸಾಕ್ಷಿ ತೆಗೆದು ನೋಡಿದಾಗ ಇಡೀ ನಾಟಕದ ರಹಸ್ಯ ಮೊಬೈಲ್ ಮೆಸೇಜ್ ನಲ್ಲಿತ್ತು.
ಇದೀಗ ಆರೋಪಿ ಬಂಧನದ ಬೆನ್ನಲ್ಲೇ ಯುವತಿ ಉಲ್ಟಾ ಹೊಡೆದಿದ್ದು, ಆರೋಪಿ ನನಗೆ ಪರಿಚಯ ಅಂದಿದ್ದಾಳೆ. ಹೀಗಾಗಿ ಸಂತ್ರಸ್ತೆ ಹೇಳಿಕೆ ಪಡೆದು ಪ್ರಕರಣವನ್ನು ರಾತ್ರಿಯೇ ಮುಗಿಸಿದ್ದಾರೆ ಎನ್ನಲಾಗಿದೆ.
Discussion about this post