ದಿಲ್ಲಿಯ ರೈತ ಹೋರಾಟದ ಸಂದರ್ಭದಲ್ಲಿ ಕರೆ ಕೊಟ್ಟಿರುವ ಜಿಯೋ ಹಠಾವೋ ಆಂದೋಲನ ರಿಲಾಯನ್ಸ್ ಕಂಪನಿಗೆ ಸಂಕಷ್ಟ ತಂದೊಡ್ಡಿದೆ.
ರೈತ ಹೋರಾಟಕ್ಕೂ ಜಿಯೋ ಕಂಪನಿಗೆ ಸಂಬಂಧವೇ ಇಲ್ಲ, ಹಾಗಿದ್ದರೂ ಅದ್ಯಾರೋ ಕರೆ ಕೊಟ್ಟಿರುವ ಜಿಯೋ ಹಠಾವೋ ಆಂದೋಲನ ಸಿಕ್ಕಾಪಟ್ಟೆ ವೇಗ ಪಡೆದುಕೊಂಡಿದೆ.
ಈ ನಡುವೆ ನಂಬರ್ ಪೋರ್ಟಬಿಲಿಟಿಯಿಂದ ಕಂಗಲಾದ ಜಿಯೋ ಪ್ರತಿಸ್ಪರ್ಧಿಗಳ ಮೇಲೆ ಕೆಂಡಾಮಂಡಲವಾಗಿದೆ. ತನ್ನ ಪ್ರತಿಸ್ಪರ್ಧಿಗಳಾದ ಏರ್ ಟೆಲ್, ವೋಡಾ ಫೋನ್ ವಿರುದ್ಧ ದೂರಸಂಪರ್ಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದೆ.
ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಲಾಭ ಪಡೆದುಕೊಳ್ಳಲು ಏರ್ ಟೆಲ್ ಹಾಗೂ ವಿ ಕಂಪನಿಗಳು ಯತ್ನಿಸುತ್ತಿದೆ. ನಂಬರ್ ಪೋರ್ಟಬಿಲಿಟಿ ಅಭಿಯಾನ ಪ್ರಾರಂಭಿಸುವ ಮೂಲಕ ಈ ಎರಡೂ ಕಂಪನಿಗಳು ಅನೈತಿಕ ಮತ್ತು ಸ್ಪರ್ಧಾತ್ಮಕ ವಿರೋಧಿ ವರ್ತಿಸುತ್ತಿದೆ. ನಂಬರ್ ಪೋರ್ಟ್ ಮಾಡುವುದು ರೈತರ ಪ್ರತಿಭಟನೆಗೆ ನೀಡುವ ಬೆಂಬಲವಾಗಿರಲಿದೆ ಎಂದು ಪ್ರತಿಸ್ಪರ್ಧಿ ಸಂಸ್ಥೆಗಳು ಸುಳ್ಳು ಹೇಳುತ್ತಿವೆ ಅಂತಾ ಎಂದು ಜಿಯೋ ತನ್ನ ದೂರಿನಲ್ಲಿ ತಿಳಿಸಿದೆ.
ಈ ನಡುವೆ ಜಿಯೋ ದೂರಿಗೆ ಖಡಕ್ಕ್ ಪ್ರತಿಕ್ರಿಯೆ ಕೊಟ್ಟಿರುವ ಏರ್ ಟೆಲ್ ಮತ್ತು ವಿ ಕಂಪನಿ ವಕ್ತಾರರು, ಜಿಯೋ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿದೆ. ಹಾಗಿದ್ದರೂ ನಮ್ಮ ವ್ಯವಹಾರ ಪಾರದರ್ಶಕತೆಯಿಂದ ಕೂಡಿದೆ ಎಂದು ಎರ್ ಟೆಲ್ ಹೇಳಿದೆ.
Discussion about this post