ಹಿಂದೂವಲ್ಲದ ವ್ಯಕ್ತಿ ತರೋ ಆಹಾರವನ್ನು ನಾನು ಸೇವಿಸಲಾರೆ ಎಂದು ಝೊಮ್ಯಾಟೋ ನಲ್ಲಿ ಬುಕ್ ಮಾಡಿದ್ದ ಆಹಾರವನ್ನು ಕ್ಯಾನ್ಸಲ್ ಮಾಡಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಮಾಡಿಕೊಂಡು ಟ್ವೀಟರ್ ನಲ್ಲಿ ಬರೆದುಕೊಂಡಿದ್ದ ಮಧ್ಯಪ್ರದೇಶ ಜಬಲ್ಪುರ ಮೂಲದ ಅಮಿತ್ ಶುಕ್ಲಾಗೆ ಝೊಮ್ಯಾಟೊ ಕಂಪನಿ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ನೀಡಿದೆ. ಖಡಕ್ ತಿರುಗೇಟು ನೀಡಿದೆ.
ಅಮಿತ್ ಶುಕ್ಲಾ ಝೊಮ್ಯಾಟೊ ಆ್ಯಪ್ ಮೂಲಕ ಆಹಾರ ಬುಕ್ ಮಾಡಿದ್ದ. ಆದರೆ ಆಹಾರ ತರುವ ವ್ಯಕ್ತಿ ಹಿಂದುವಲ್ಲ ಎಂದು ಗೊತ್ತಾಗುತ್ತಿದ್ದಂತೆ, ಡೆಲಿವರಿ ಬಾಯ್ ಬದಲಿಸುವಂತೆ ವಿನಂತಿಸಿದ್ದ. ಇದಕ್ಕೆ ಕಂಪನಿ ಆಗಲ್ಲ ಅಂದಿತ್ತು. ಹೀಗಾಗಿ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಸೂಚಿಸಿದ್ದ. ಆದರೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹಣ ರಿಫಂಡ್ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿತು. ಹೀಗಾಗಿ ನೀವು ಡೆಲಿವರಿ ಸ್ವೀಕರಿಸುವಂತೆ ಹಾಕುವಂತಿಲ್ಲ ಹಾಗೂ ನನಗೂ ರಿಫಂಡ್ ಬೇಕಾಗಿಲ್ಲ ಎಂದು ಅಮಿತ್ ಹೇಳಿದ್ದ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಝೊಮ್ಯಾಟೊ, ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ ಎಂದು ಬರೆದು ತಿರುಗೇಟು ಕೊಟ್ಟಿತು.
ಮಾತ್ರವಲ್ಲದೆ ಈ ಕುರಿತು ಟ್ವೀಟ್ ಮಾಡಿದ ಝೊಮ್ಯಾಟೊ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾರ್ಟನರ್ ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಲ್ಲಿ ದುಃಖ ಆಗಲಾರದು ಅಂದಿದ್ದಾರೆ. ಈ ಮೂಲಕ ನಿನ್ನಂಥ ಗ್ರಾಹಕನನ್ನು ಕಳೆದುಕೊಂಡರೆ ನಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದರ ಬೆನ್ನಲ್ಲೇ ಝೊಮ್ಯಾಟೊ ಬೆಂಬಲಕ್ಕೆ ಧಾವಿಸಿದ ಉಬರ್ ಫುಡ್ ನಾವು ನಿಮ್ಮೊಂದಿಗಿದ್ದೇವೆ ಅನ್ನುವ ಮೂಲಕ ವೃತ್ತಿ ಪೈಪೋಟಿಯನ್ನು ಬದಿಗೊತ್ತಿ ಹೊಟ್ಟೆ ತಣಿಸುವ ಆಹಾರ ವಿಚಾರದಲ್ಲಿ ಧರ್ಮವನ್ನು ಬೆರೆಸಿದ ವ್ಯಕ್ತಿಗೆ ಟಾಂಗ್ ಕೊಟ್ಟಿತು.
Discussion about this post