ಯಕ್ಷಗಾನಕ್ಕೆ ಅವಮಾನ ಎಸಗಿದ್ದ ಝೀ ಕನ್ನಡ ವಾಹಿನಿ ತಪ್ಪಾಯ್ತು (Zee Kannada Sorry) ಕ್ಷಮಿಸಿ ಅಂದಿದೆ. ಈ ಮೂಲಕ ವಸಂತ ಗಿಳಿಯಾರ್ ನೇತೃತ್ವದ ಹೋರಾಟಕ್ಕೆ ಜಯ ಸಿಕ್ಕಿದೆ. Boycott Zee Kannada ಹೋರಾಟ ಯಶಸ್ವಿಯಾಗಿದೆ.
ಉಡುಪಿ : ಝೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance ) ಕಾರ್ಯಕ್ರಮದಲ್ಲಿ ಕರಾವಳಿಯ ಆರಾಧನ ಕಲೆ ಯಕ್ಷಗಾನಕ್ಕೆ ( Yakshagana) ಅವಮಾನ ಎಸಗಲಾಗಿದೆ. ಈ ಮೂಲಕ ಯಕ್ಷ ಪ್ರೇಮಿಗಳ ಭಾವನೆಗೆ ಧಕ್ಕೆ ತರಲಾಗಿತ್ತು.( Zee Kannada Sorry)
ವೇದಿಕೆಯಲ್ಲೇ ಯಕ್ಷಗಾನಕ್ಕೆ ಅವಮಾನವಾಗುತ್ತಿದ್ರು ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದ ರಕ್ಷಿತಾ, ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಪ್ರದರ್ಶನವನ್ನು ಹೊಗಳಿದ್ದು ಬಿಟ್ರೆ ಕರಾವಳಿಗರ ಭಾವನೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ : Zee Kannada : ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ಸಿಡಿದೆದ್ದ ಕರಾವಳಿ
ಇದರಿಂದ ಅಸಮಾಧಾನಗೊಂಡ ಪತ್ರಕರ್ತ ವಸಂತ ಗಿಳಿಯಾರ್ ( Vasanth Giliyar ) ಹೋರಾಟಕ್ಕೆ ಮುಂದಾದ್ರು, ಝೀ ಕನ್ನಡ ( Zee Kannada ) ಯಕ್ಷಗಾನಕ್ಕೆ ಅವಮಾನ ಎಸಗುತ್ತಿರುವುದು ಮೊದಲೇನಲ್ಲ, ಮೂರನೇ ಸಲ ಹೀಗೆ ಮಾಡುತ್ತಿದೆ ಎಂದು ಹೋರಾಟಕ್ಕೆ ಮುಂದಾದ್ರು. ಗಿಳಿಯಾರ್ ಹೋರಾಟಕ್ಕೆ ಕರ್ನಾಟಕದ ಯಕ್ಷ ಪ್ರೇಮಿಗಳು ಕೈ ಜೋಡಿಸಿದ್ರು.
ಈ ವೇಳೆ ಸಾಮಾಜಿಕ ಜಾಲತಾಣ ಖಾತೆಯಲ್ಲೊಂದು ಪೋಸ್ಟರ್ ಹಂಚಿಕೊಂಡ ಝೀ ಕನ್ನಡ (Zee Kannada ) ಭಾವನೆಗೆ ಧಕ್ಕೆಯಾದ್ರೆ ವಿಷಾಧ ಅಂದಿತ್ತು. ಆದರೆ ಹಿಂದೆಯೂ ಹೀಗೆ ಕ್ಷಮೆ ಕೇಳಿ ಮತ್ತೆ ಮಾಡಿದ್ದು ಅವಮಾನ ಹೀಗಾಗಿ ವೇದಿಕೆಯಲ್ಲೇ ಕ್ಷಮೆ ಬೇಕು ಎಂದು ಆಗ್ರಹಿಸಿದರು. ಆದರೆ ಝೀ ವಾಹಿನಿ ಅದಕ್ಕೆ ಸೊಪ್ಪು ಹಾಕಲಿಲ್ಲ.
ಹೀಗಾಗಿ ಹೋರಾಟವನ್ನು ಬೆಂಗಳೂರಿಗೆ (Bengaluru) ತೆಗೆದುಕೊಂಡ ಹೋರಾಟಗಾರರು, ಝೀ ವಾಹಿನಿಯ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿದರು. ಕರವೇಯ ಪ್ರವೀಣ್ ಶೆಟ್ಟಿ ಸೇರಿದಂತೆ ಅನೇಕರು ಈ ವೇಳೆ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆಯಲ್ಲೇ ಕ್ಷಮೆ ಕೇಳಿದ್ರೆ ಸರಿ, ತಪ್ಪಾದ ಜಾಗದಲ್ಲೇ ಕ್ಷಮೆ ಕೇಳದಿದ್ರೆ ಮುಂದಿನ ಅನಾಹುತಗಳಿಗೆ ನಾವು ಕಾರಣರಲ್ಲ, ಕಾನೂನಾತ್ಮಕವಾಗಿಯೇ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಇದೀಗ ಹೋರಾಟಕ್ಕೆ ಮಣಿದಿರುವ ವಾಹಿನಿ ಯಕ್ಷಗಾನ ಪ್ರೇಮಿಗಳ ಕ್ಷಮೆ ಕೇಳಿದ್ದು, ಕರಾವಳಿಯ ಮುಂದೆ ಮಂಡಿಯೂರಿದೆ. ಈ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
Discussion about this post