ಕಾಡು ಹಂದಿಯ ರೆಸಿಪಿ ತಯಾರಿಸಿ ಸುದ್ದಿಯಾಗಿದ್ದ ಪ್ರಣಯ್ ಕುಮಾರ್
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿರೇಕ ವರ್ತನೆಗಳೇ ಹೆಚ್ಚಾಗುತ್ತಿದೆ. ಹೆಚ್ಚು Views ಆಸೆಗೆ ಬೀಳೋ ಯೂಟ್ಯೂಬರ್ ಗಳು ದಾರಿ ತಪ್ಪುತ್ತಿದ್ದಾರೆ. ಹೀಗೆ ನವಿಲಿನ ಸಾಂಬಾರ್ ತಯಾರಿಸಿ ಪ್ರದರ್ಶಿಸಿದ ಯೂಟ್ಯೂಬರ್ ಒಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ
ತೆಲಂಗಾಣದ ಯೂಟ್ಯೂಬರ್ ತಂಗಲ್ಲಪಲ್ಲಿ ನಿವಾಸಿ ಕೋಡಮ್ ಪ್ರಣಯ್ ಕುಮಾರ್ ಎಂಬಾತ, ನವಿಲಿನ ಸಾಂಬಾರ್ ತಯಾರಿಸಿ ಅದನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದ. ಇದಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಯೂಟ್ಯೂಬರ್ ನನ್ನು ಬಂಧಿಸಿದ ಪೊಲೀಸರು ವನ್ಯಜೀವಿ ರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ ಆತನ ಮನೆಯಲ್ಲಿ ಪತ್ತೆಯಾದ ಚಿಕನ್ ಕರಿ ಎನ್ನಲಾದ ರೆಸಿಪಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜೊತೆಗೆ ವಿವಾದಕ್ಕೆ ಕಾರಣವಾದ ವಿಡಿಯೋವನ್ನು ಕೂಡಾ ಸಾಮಾಜಿಕ ಜಾಲತಾಣ ವೇದಿಕೆಯಿಂದ ತೆಗೆದು ಹಾಕಲಾಗಿದೆ.
ಈ ಮೊದಲು ಕಾಡು ಹಂದಿಯ ರೆಸಿಪಿ ಮಾಡಿ ಇದೇ ಕೋಡಮ್ ಪ್ರಣಯ್ ಕುಮಾರ್ ಸುದ್ದಿಯಾಗಿದ್ದ.