ವರ್ಷದ ಅಂತ್ಯಕ್ಕೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಅನ್ನುವುದು ಹಳೆಯ ಸುದ್ದಿ. ಯಡಿಯೂರಪ್ಪ ಪೂರ್ಣವಧಿ ಮುಖ್ಯಮಂತ್ರಿಯಾಗಿರೋದಿಲ್ಲ ಅನ್ನುವುದು ಕೂಡಾ ಹಳೆ ಸುದ್ದಿ. ಇದೀಗ ಹೊಸ ಸುದ್ದಿ ಅಂದ್ರೆ ಕೇರಳ ರಾಜ್ಯದ ರಾಜ್ಯಪಾಲರಾಗಿ ಬಿ ಎಸ್ ಯಡಿಯೂರಪ್ಪ ಹೋಗ್ತಾರಂತೆ.
ಇದನ್ನು ಹೇಳಿರುವುದು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ . ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಕ್ಷೇಮ ಇಲ್ಲ. ಅನಿವಾರ್ಯ ಕಾರಣಗಳಿಂದ ಹೈಕಮಾಂಡ್ ಯಡಿಯೂರಪ್ಪನವರಿಗೆ ಎರಡು ತಿಂಗಳು ಗ್ರೇಸ್ ಪಿರೇಡ್ ಕೊಟ್ಟಿದ್ದಾರೆ. ಅದು ಡಿಸೆಂಬರ್‌ವರೆಗೂ ಮುಂದುವರಿಯುತ್ತದೆ.

ಡಿಸೆಂಬರ್ ಹೊತ್ತಿಗೆ ಅಧಿಕಾರದಿಂದ ಕೆಳಗಿಳಿಯುವಂತೆ ಯಡಿಯೂರಪ್ಪನವರಿಗೆ ತಿಳಿಸಿದೆ. ಪುತ್ರ ವಿಜಯೇಂದ್ರ ಅವರನ್ನು ಎಮ್‌ಎಲ್‌ಸಿ ಮಾಡಿ ಮಂತ್ರಿಸ್ಥಾನ ನೀಡುತ್ತೇನೆ ಅನ್ನುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ ಎಂದು ಕುಂದಕೂರ ಹೇಳಿದ್ದಾರೆ.
ಆದರೆ ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಯಾಕಂದ್ರೆ ಬಿಜೆಪಿಯವರು ಈ ಬಗ್ಗೆ ಏನನ್ನೂ ಹೇಳಿಲ್ಲ.
Discussion about this post