ಕಣ್ಣೂರು : ಕೇರಳದ ಕಣ್ಮಣಿ, ದೇವರನಾಡಿನ ಸಿಂಗಂ ಎಂದೇ ಪ್ರಸಿದ್ಧರಾಗಿರುವ ದಾವಣಗೆರೆ ಮೂಲಕ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಇನ್ನು ಮೂರು ವರ್ಷಗಳ ಕಾಲ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಕೇರಳ ಸರ್ಕಾರ ಯತೀಶ್ ಚಂದ್ರ ಅವರನ್ನು ಕೇರಳ ಕೇಡರ್ ನಿಂದ ಬಿಡುಗಡೆ ಮಾಡಿದ್ದು ಕರ್ನಾಟಕ ಕೇಡರ್ ನಲ್ಲಿ ಮುಂದಿನ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವಂತೆ ಸೂಚಿಸಿದೆ.
ಈ ಸಂಬಂಧ ಕೇರಳ ರಾಜ್ಯ ಸರ್ಕಾರ ಕ್ಯಾಬಿನೆಟ್ ಸಭೆ ತೀರ್ಮಾನ ಕೈಗೊಂಡಿದ್ದು, ತಕ್ಷಣ ಕರ್ನಾಟಕ ಕೇಡರ್ ಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿ.
ಕೇಂದ್ರ ಗೃಹ ಸಚಿವಾಲಯ ಯತೀಶ್ ಚಂದ್ರ ಅರ ವರ್ಗಾವಣೆ ಕುರಿತಂತೆ ಇತ್ತೀಚೆಗೆ ಪ್ರಸ್ತಾಪವೊಂದನ್ನು ಸಲ್ಲಿಸಿತ್ತು.

2020ರ ಮಾರ್ಚ್ ನಲ್ಲಿ ಕೊರೋನಾ ಲಾಕ್ ಡೌನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದಿದ್ದ ನಾಲ್ವರಿಗೆ ರಸ್ತೆಯಲ್ಲೇ ಶಿಕ್ಷೆ ವಿಧಿಸಿ ಸುದ್ದಿಯಾಗಿದ್ದರು.
ಅವರು ಮಾಡಿದ ಕಾರ್ಯ ಸಮಾಜದಲ್ಲಿ ಮೆಚ್ಚುಗೆ ಪಡೆದರೂ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
2017ರಲ್ಲೂ ಕೊಚ್ಚಿಯಲ್ಲಿ ಪೊಲೀಸ್ ಆಯುಕ್ತರಾಗಿದ್ದ ವೇಳೆ ನಡೆದ ಲಾಛಿ ಜಾರ್ಜ್ ಸಂಬಂಧ ಯತೀಶ್ ತನಿಖೆ ಎದುರಿಸಿದ್ದರು.
2018ರಲ್ಲಿ ಶಬರಿಮಲೆ ವಿವಾದ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ತಡೆದರು ಅನ್ನುವ ಕಾರಣಕ್ಕೆ ಕೇರಳ ಬಿಜೆಪಿ ಉಗ್ರ ಸ್ವರೂಪ ತಳೆದಿತ್ತು.
ಕೇಂದ್ರಕ್ಕೆ ಪತ್ರ ಬರೆದು ಯತೀಶ್ ವಿರೋಧ ಆರೋಪಗಳ ಸುರಿಮಳೈಗೈಯಲಾಗಿತ್ತು.
2015 ರಲ್ಲಿ ಯತೀಶ್ ಚಂದ್ರ ಅವರು ಎರ್ನಾಕುಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು ಈ ವೇಳೆ. ಅಂಗಮಲೈ ಎಂಬಲ್ಲಿ ಮಾಜಿ ಸಿಎಂ ಅಚ್ಚುತಾನಂದನ್ ನೇತೃತ್ವದಲ್ಲಿ ಎಡಪಕ್ಷಗಳ ಸಮಾವೇಶವೊಂದು ನಡೆದಿತ್ತು.
ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯತೀಶ್ ಚಂದ್ರ ಅವರು ಎಡಪಕ್ಷದ ಕಾರ್ಯಕರ್ತನೋರ್ವನಿಗೆ ಲಾಠಿ ಬೀಸಿದ್ದರು.

ಇದರ ವಿರುದ್ಧ ಸಿಪಿಎಂ ಹೋರಾಟ ಪ್ರಾರಂಭಿಸಿತ್ತು. ಅಚ್ಚುತಾನಂದನ್, ಯತೀಶ್ ಚಂದ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಸಿಎಂ ಪಿಣರಾಯಿ ವಿಜಯನ್ ಸತೀಶ್ ಚಂದ್ರರಿಗೆ ಹುಚ್ಚು ನಾಯಿ ಪಟ್ಟ ಕಟ್ಟಿ, ಅವರನ್ನು ಅಮಾನತು ಮಾಡುವುದಾಗಿಯೂ ತಿಳಿಸಿದ್ದರು.
ಈ ವೇಳೆ ಬಿಜೆಪಿ ಪಕ್ಷವು ಯತೀಶ್ ಅವರ ಬೆನ್ನಿಗೆ ನಿಂತಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಯತೀಶ್ ಚಂದ್ರ ಪರ ಅಭಿಯಾನ ನಡೆಸಿತು.
ಈ ವೇಳೆ ಎಡಪಂಥೀಯ ನಾಯಕರ ವಿರೋಧವನ್ನು ಯತೀಶ್ ಚಂದ್ರ ಕಟ್ಟಿಕೊಂಡಿದ್ದರು.
ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದಿನಿಯರಿಂಗ್ ಪದವಿ ಪಡೆದ ಯತೀಶ್ ಚಂದ್ರ ಕಾಂಗ್ನಿಜೆಂಟ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು.

ಈ ನಡುವೆ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯತೀಶ್ 2010ರಲ್ಲಿ 211 rank ಪಡೆದು ಉತೀರ್ಣರಾದರು.
ಕೇರಳದ ಕೇಡರ್ ನಲ್ಲಿ ಐಪಿಎಸ್ ಅಧಿಕಾರಿಯಾಗಿ ದೇವರ ನಾಡಿಗೆ ತೆರಳಿದರು. ತಮ್ಮ ಕಾರ್ಯವೈಖರಿ ಮೂಲಕ ಗಮನ ಸೆಳೆದಿದ್ದ ಯತೀಶ್ ಚಂದ್ರದೇವರನಾಡಿನ ಜನರಿಗೆ ತುಂಬಾ ಆತ್ಮೀಯರಾಗಿದ್ದರು.
ಕೇರಳ ನೆರೆ ಹಾಗೂ ಕೊರೋನಾ ಸಂದರ್ಭದಲ್ಲಿ ಯತೀಶ್ ಚಂದ್ರ ಅವರು ಮಾಡಿದ ಕೆಲಸವನ್ನೂ ಇಂದಿಗೂ ಕೇರಳಿಗರು ನೆನಪಿಸಿಕೊಳ್ಳುತ್ತಿದ್ದಾರೆ.
ಇದೀಗ ತಾಯ್ನಾಡಿನ ಋಣ ತೀರಿಸಲು ಬರುತ್ತಿದ್ದಾರೆ.
Discussion about this post