ಕಾಬೂಲ್ : ಉಗ್ರರಿಂದಲೇ ಕೂಡಿರುವ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಲು ವಿಶ್ವದ ಬಹುತೇಕ ರಾಷ್ಟ್ರಗಳು ಹಿಂದೇಟು ಹಾಕಿವೆ. ತಾಲಿಬಾನಿಗಳು ರಚಿಸಿರುವ ಅಫ್ಘಾನ್ ಸರ್ಕಾರದಲ್ಲಿ ಮೋಸ್ಟ್ ವಾಟೆಂಡ್ ಗಳೇ ತುಂಬಿದ್ದು, ಹಲವು ಉಗ್ರ ಕೃತ್ಯಗಳಲ್ಲಿ ಭಾಗವಹಿಸಿದ ಆರೋಪ ಹೊತ್ತಿದ್ದಾರೆ.
ಈ ನಡುವೆ ಚೀನಾ ಮಾತ್ರ ಅಫ್ಘಾನಿಸ್ತಾನದಲ್ಲಿ ಸರ್ಕಾರ ನಡೆಸಲು ಮುಂದಾಗಿರುವ ತಾಲಿಬಾನ್ಗೆ 31 ದಶಲಕ್ಷ ಡಾಲರ್ ಅಂದ್ರೆ ಅಂದಾಜು 230 ಕೋಟಿ ನೆರವು ಘೋಷಿಸಿದೆ. ಇದರಲ್ಲಿ ಆಹಾರ ಪದಾರ್ಥ ಪೂರೈಕೆ, ವಸ್ತ್ರ, ಹೊದಿಕೆ ಪೂರೈಕೆ, ಕೊರೊನಾ ನಿರೋಧಕ ಲಸಿಕೆ ಸರಬರಾಜು ಸೇರಿದೆ.
ಅಂದ ಹಾಗೇ ತಾಲಿಬಾನಿಗಳಿಗೆ ನೆರವು ಘೋಷಿಸಿದ ಮೊದಲ ಸರ್ಕಾರ ಇದಾಗಿದ್ದು ಈ ಮೂಲಕ ಚೀನಾ ಭಾರತದ ವಿರುದ್ಧ ತಾಲಿಬಾನಿಗಳನ್ನು ಬಳಸಿಕೊಳ್ಳುವುದು ಖಚಿತವಾಗಿದೆ.
Discussion about this post