ಬೆಂಗಳೂರು : ಕಳೆದ ತಿಂಗಳು ತೀರಾ ಕುಸಿತ ಕಂಡಿದ್ದ ಚಿನ್ನದ ದರ ಹೊಸ ಭರವಸೆಯನ್ನು ಮೂಡಿಸಿತ್ತು. ಚಿನ್ನದ ಮೇಲಿನ ಹೂಡಿಕೆ ಹಾಗೂ ಚಿನ್ನ ಖರೀದಿಗೆ ಸಕಾಲ ಎಂದು ಭಾವಿಸಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಚಿನ್ನದ ಮಾರುಕಟ್ಟೆ ಆಗಿರುವ ಬೆಳವಣಿಗೆ ಆತಂಕ ಮೂಡಿಸಿದೆ.
ಇಂದು ಅಂದರೆ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 47,350 ರೂಪಾಯಿ ಆಗಿದೆ. ಅಕ್ಟೋಬರ್ 1 ರಂದು ಈ ದರ 46,960 ರೂಪಾಯಿ ಆಗಿತ್ತು. ಇನ್ನು 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 43,400 ರೂಪಾಯಿ ಆಗಿದೆ. ನಿನ್ನೆ 43,050 ರೂಪಾಯಿ ಇತ್ತು.

ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿಗೆ 59,500 ರೂಪಾಯಿ ಆಗಿದೆ. ಆ ಮೂಲಕ ಬೆಳ್ಳಿ ಬೆಲೆಯಲ್ಲಿ 1,200 ರೂಪಾಯಿ ಏರಿಕೆಯಾಗಿದೆ.

ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,920 ರೂಪಾಯಿ, ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,470 ರೂಪಾಯಿ ದರ ನಿಗದಿಯಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಚಿನ್ನದ ದರ ಏರಿಕೆ ಕಾಣಲಿದೆ. ಹೀಗಾಗಿ ಒಂದಿಷ್ಟು ದಿನ ಕಾದು ಚಿನ್ನ ಖರೀದಿಗೆ ನಿರ್ಧರಿಸುವುದು ಒಳಿತು.
Discussion about this post