ಬೆಂಗಳೂರು : IPL ನ 14ನೇ ಆವೃತ್ತಿಗೆ ಇದೀಗ ಸಿದ್ದತೆಗಳು ಪ್ರಾರಂಭಗೊಂಡಿದೆ. ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಅನ್ನುವಷ್ಟರಲ್ಲಿ ಇದೀಗ ಟೈಟಲ್ ಪ್ರಾಯೋಜಕತ್ವದ ಸಮಸ್ಯೆ ಎದುರಾಗಿದೆ.
ಕಳೆದ ವರ್ಷ 222 ಕೋಟಿ ಕೊಟ್ಟಿದ್ದ ಡ್ರೀಮ್ 11 ಟೈಟಲ್ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು.
ಈ ವರ್ಷ ದೊಡ್ಡ ಮೊತ್ತಕ್ಕೆ ಟೈಟಲ್ ಪ್ರಾಯೋಜಕತ್ವವನ್ನು ಮಾರಾಟ ಮಾಡುವುದು ಬಿಸಿಸಿಐನ ಉದ್ದೇಶ. ಆದರೆ ಡ್ರೀಮ್ 11 ಕೊಡುವುದಾದರೆ ಕಳೆದ ವರ್ಷದ ಮೊತ್ತಕ್ಕೆ ಕೊಡಿ, ಇಲ್ಲವಾದರೆ ಬೇಡ ಎಂದು ಕೂತಿದೆ.
ಹೀಗಾಗಿ ಬಿಸಿಸಿಐ ಕಳೆದ ವರ್ಷಕ್ಕಿಂತ ಒಂದಿಷ್ಟು ಮೊತ್ತ ಏರಿಸಿ ಬಿಡ್ ಮಾಡಿ ಎಂದು ಡ್ರೀಮ್ 11 ಮುಂದೆ ಕೂತಿದೆ.
ಇನ್ನು ವಿವೋ ಐಪಿಎಲ್ ಪ್ರಾಯೋಜಕತ್ವ ವಹಿಸಿಲು ಆಸಕ್ತಿಯನ್ನೇ ಹೊಂದಿಲ್ಲ. 2018ರಲ್ಲಿ ವರ್ಷಕ್ಕೆ 440 ಕೋಟಿಯಂತೆ ನೀಡೋದಾಗಿ ಹೇಳಿ 5ವರ್ಷಗಳ ಒಪ್ಪಂದಕ್ಕೆ ವಿವೋ ಸಹಿ ಹಾಕಿತ್ತು. ಆದರೆ ಭಾರತ ಹಾಗೂ ಚೀನಾ ಸಂಬಂಧ ಹದಗೆಟ್ಟ ಕಾರಣ ವಿವೋ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು.
ಒಂದು ಬಿಸಿಸಿಐ ಮತ್ತು ಡ್ರೀಮ್ 11 ನಡುವೆ ಸಮಸ್ಯೆ ಬಗೆ ಹರಿಯದಿದ್ರೆ ಟೈಟಲ್ ಪ್ರಾಯೋಜಕರಿಲ್ಲದೆ ಐಪಿಎಲ್ ನಡೆಯೋ ಸಾಧ್ಯತೆಗಳಿದೆ.
Discussion about this post