ಭಾರತ ಕೊರೋನಾ ಸೋಂಕಿನ ಎರಡನೆ ಅಲೆ ಎದುರಿಸಲು ಸಜ್ಜಾಗುತ್ತಿದೆ. ಕೊರೋನಾ ಬಾರದಂತೆ ತಡೆಗಟ್ಟಿ ಎಂದು ಜನತೆಯಲ್ಲಿ ಮನವಿ ಮಾಡಿ ಸರ್ಕಾರವೂ ಸುಸ್ತಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳಿರುವುದು ಯಾವುದೇ ಪ್ರಯೋಜನ ತಂದುಕೊಟ್ಟಿಲ್ಲ. ಹೀಗಾಗಿ ಸರ್ಕಾರ ಅನಿವಾರ್ಯ ಅನ್ನುವಂತೆ ಕೊರೋನಾ ಮಾರ್ಗಸೂಚಿಯನ್ನು ಮತ್ತೆ ಕಟ್ಟು ನಿಟ್ಟಾಗಿ ಜಾರಿ ಮಾಡಲು ಮುಂದಾಗಿದೆ.
ಈ ನಡುವೆ ಅಮೆರಿಕಾ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೊರೋನಾ ಸೋಂಕಿನ ನಾಲ್ಕನೆ ಅಲೆಯ ಅಬ್ಬರ ಪ್ರಾರಂಭವಾಗಿದೆ. ಕಳೆದೊಂದು ವಾರದಲ್ಲಿ ಪ್ರತೀ ದಿನ 63 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಳೆದ ಜನವರಿಯಲ್ಲೇಯಷ್ಟೇ ಮೂರನೆ ಅಲೆಯ ಹೊಡೆತ ಅನುಭವಿಸಿದ್ದ ಅಮೆರಿಕಾ ಚೇತರಿಸಿಕೊಳ್ಳುತ್ತಿದೆ ಅನ್ನುವಷ್ಟರಲ್ಲಿ ನಾಲ್ಕನೆ ಅಲೆ ಪ್ರಾರಂಭವಾಗಿದೆ.
ಒಂದು ನೆಮ್ಮದಿಯ ಸುದ್ದಿ ಅಂದ್ರೆ ಒಟ್ಟು 50 ರಾಜ್ಯಗಳ ಪೈಕಿ 5 ರಾಜ್ಯಗಳಲ್ಲಿ ಸೋಂಕಿನ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ.ಮತ್ತೊಂದು ಗಮನಾರ್ಹ ಅಂಶ ಅಂದ್ರೆ ಕೊರೋನಾ ಏರಿಕೆಗೆ ಅಮೆರಿಕಾದ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದೇ ಕಾರಣ ಅನ್ನುವುದು ಗೊತ್ತಾಗಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳನ್ನು ಕೊರೋನಾ ನಿಯಮಗಳನ್ನು ಕಡಿಮೆ ಮಾಡಿದ ಕಾರಣಕ್ಕೆ ಸೋಂಕಿನ ಎರಡನೆ ಅಲೆ ತೀವ್ರವಾಗತೊಡಗಿದೆ.