ಚೀನಾ ಮಹಾಗೋಡೆ ಎಲ್ಲಿದೆ…? ಉತ್ತರಿಸಿ ಅಂದ್ರೆ ಏನು ಹೇಳ್ತಿರಿ… ಚೀನಾ ಮಹಾಗೋಡೆ ಚೀನದಲ್ಲೇ ಇರುತ್ತದೆ ಎಂದು ನೀವು ಹೇಳ್ತಿರಿ. ಆದರೆ ಟರ್ಕಿ ದೇಶದ ಮಹಿಳೆಯೊಬ್ಬರು ಚೀನಾದ ಮಹಾಗೋಡೆ ಎಲ್ಲಿದೆ ಎಂದು ತಿಳಿಯಲು ಎರಡು ಲೈಫ್ ಲೈನ್ ಬಳಸಿದ್ದಾರೆ.
ಟರ್ಕಿ ಭಾಷೆಯಲ್ಲಿ ಪ್ರಸಾರವಾಗುವ Kaun banega crorepati ಕರೋಪತಿಯ ಆವತರಣಿಕೆ who wants to be a millionaire ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿ ಈ ಪ್ರಶ್ನೆಗೆ ಉತ್ತರಿಸಲು ಎರಡು ಲೈಫ್ ಲೈನ್ ಬಳಸಿ ಇಂಟರ್ ನ್ಯಾಶನಲ್ ಲೆವಲ್ ನಲ್ಲಿ ಸುದ್ದಿಯಾಗಿದ್ದಾರೆ.
who wants to be a millionaire ಅನ್ನುವುದು ಕನ್ನಡದ ಕೋಟ್ಯಾಧಿಪತಿ ರೀತಿಯಲ್ಲೇ ಟರ್ಕಿ ಭಾಷೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಐಹನ್ ಅವರಿಗೆ ಚೀನಾ ಮಹಾಗೋಡೆ ಎಲ್ಲಿದೆ ಎಂದು ನಿರೂಪಕ ಪ್ರಶ್ನೆ ಕೇಳಿದ್ದಾನೆ. ಚೀನಾ, ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್ ಎಂದು ಆಯ್ಕೆ ಬೇರೆ ಕೊಟ್ಟಿದ್ದಾರೆ.
ತಲೆ ಕೆರೆದುಕೊಂಡ ಸುಐಹಾನ್ ಆಡಿಯನ್ಸ್ ಫೋಲ್ ಮೊರೆ ಹೋದ್ಲು. ಅಲ್ಲಿ ಕೂತವರು ಎಂಥಾ ಬುದ್ದಿವಂತರು ಅಂದರೆ 51% ಜನ ಮಾತ್ರ ಚೀನಾ ಎಂದರು. ಉಳಿದ ಶೇ49 ಮಂದಿ ಚೀನಾ ಮಹಾಗೋಡೆಯನ್ನು ಬೇರೆ ದೇಶಗಳಿಗೆ ಶಿಫ್ಟ್ ಮಾಡಿದ್ದರು.
ಇದರಿಂದ ತಲೆ ಗೊಬ್ಬರ ಮಾಡಿಕೊಂಡ ಮಹಿಳೆ..ಯಾಕೋ ಆಡಿಯನ್ಸ್ ದಾರಿ ತಪ್ಪಿಸುತ್ತಿದ್ದಾರೆ ಎಂದು ಫೋನೋ ಫ್ರೆಂಡ್ ಸಹಾಯಕ್ಕೆ ಹೋದ್ಲು. ಗೆಳೆಯನಿಗೆ ಸಾಮಾನ್ಯ ಜ್ಞಾನ ಚೆನ್ನಾಗಿತ್ತು. ಅಯ್ಯೋ ಚೀನಾ ಮಹಾಗೋಡೆ ಚೀನಾದಲ್ಲೇ ಇದೆ ಎಂದು ಉತ್ತರಿಸಿದ. ಗೆಳೆಯನ ಮಾತು ನಂಬಿದ ಸುಐಹಾನ್ ಚೀನಾ ಅನ್ನುವ ಉತ್ತರವನ್ನು ಲಾಕ್ ಮಾಡಿದ್ಲು. ಸರಿ ಉತ್ತರ ಎಂದು ಚಪ್ಪಾಳೆ ಸಿಕ್ತು. ಅಬ್ಬ ಎಂದು ನಿಟ್ಟುಸಿರು ಬಿಟ್ಟ ಸ್ಪರ್ಧಿ ಮುಜುಗರದಿಂದ ಪಾರಾದರು.
ಆದರೆ ನಮ್ಮ ನೆಟ್ಟಿಗರು ಬಿಡಬೇಕಲ್ವ. ಸುಐಹಾನ್ ಸಾಧನೆಯನ್ನು ಕೊಂಡಾಡಲು ಆರಂಭಿಸಿದ್ದಾರೆ.