ನವದೆಹಲಿ : ಕೊರೋನಾ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಡೆ ಈ ಹಿಂದಿನಿಂದಲೂ ಅನುಮಾನಕ್ಕೆ ಕಾರಣವಾಗಿದೆ. ಜಗತ್ತಿಗೆ ಆರೋಗ್ಯದ ಪಾಠ ಮಾಡಬೇಕಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಸೋಂಕು ಪ್ರಾರಂಭದ ದಿನದಿಂದಲೂ ಅನುಮಾನದ ಹೆಜ್ಜೆ ಇಟ್ಟಿತ್ತು.
ಈ ನಡುವೆ ಕೊರೋನಾ ಸೋಂಕು ಚೀನಾದ ಪುವಾನ್ ಮಾರುಕಟ್ಟೆಯಿಂದ ಅಥವಾ ಲ್ಯಾಬ್ ನಿಂದ ವೈರಸ್ ಹರಡಿದೆ ಎಂದು ಹಲವಾರು ಮಂದಿ ಪ್ರತಿಪಾದಿಸಿದ್ದರು. ಆದರೆ ಚೀನಾ ಅದನ್ನು ಒಪ್ಪಿಕೊಳ್ಳಲು ಸಿದ್ದವಿರಲಿಲ್ಲ.
ಕನಿಷ್ಟ ವಿಶ್ವ ಆರೋಗ್ಯ ಸಂಸ್ಥೆಯಾದರೂ ಈ ಬಗ್ಗೆ ಸಂಶೋಧನೆ ಕೈಗೊಳ್ಳಬೇಕಾಗಿತ್ತು. ಆದರೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ಪ್ರವೇಶಕ್ಕೆ ಸಮ್ಮಿತಿ ಸೂಚಿಸಿರಲಿಲ್ಲ. ಅಲ್ಲಿಗೆ ಕೊರೋನಾ ಚೈನಾ ವೈರಸ್ ಅನ್ನುವ ಅನುಮಾನ ದಟ್ಟವಾಗಿತ್ತು.
ಇದೀಗ ವಿಶ್ವ ಆರೋಗ್ಯ ಸಂಸ್ಥೆಯನ್ನು ಬಳಸಿಕೊಂಡಿರುವ ಚೀನಾ ತನಗೆ ತಾನೇ ಕ್ಲೀನ್ ಚಿಟ್ ಕೊಡಲು ಸಿದ್ದತೆ ನಡೆಸಿದಂತಿದೆ,
ವೈರಸ್ ಸೋರಿಕೆಯ ರಹಸ್ಯವನ್ನು ಮುಚ್ಚಿ ಹಾಕಲು ಶತ ಪ್ರಯತ್ನ ನಡೆಸುತ್ತಿರುವ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂಡಿ ಹೊಸ ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಅದರಲ್ಲಿ ಕೊರೋನ ವೈರಸ್ ಬಾವಲಿಯಿಂದ ಯಾವುದೋ ಪ್ರಾಣಿಗೆ ಹರಡಿ ನಂತರ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗಿದೆ. ಈ ಮೂಲಕ ಪ್ರಾಣಿಗಳಿಂದಲೂ ಕೊರೋನಾ ಹರಡಲಿದೆ ಎಂದು ಜನತೆಯಲ್ಲಿ ಭಯ ಮೂಡಿಸುವ ಕೆಲಸಕ್ಕೆ ವಿಶ್ವ ಸಂಸ್ಥೆ ಕೈ ಹಾಕಿದೆ.
ಆದರೆ ಈ ವರದಿಯಲ್ಲಿ ಉತ್ತರಗಳಿಲ್ಲದ ಹಲವಾರು ಪ್ರಶ್ನೆಗಳಿದ್ದು. ಈ ವರದಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಡಲಿದೆ.
Discussion about this post