ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರ ಸುಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಕೊಳ್ಳುತ್ತಿದ್ದಂತೆ NCB ಯ ಅಧಿಕಾರಿಯೊಬ್ಬರ ಹೆಸರು ಕೂಡಾ ವೈರಲ್ ಆಗುತ್ತಿದೆ. ಅವರೇ ಸಮೀರ್ ವಾಂಖೇಡೆ. Sameer Wankhede.
NCB ಯ Zonal Director ಆಗಿರುವ ಸಮೀರ್ ವಾಂಖೇಡೆ, 2008ನೇ ಬ್ಯಾಚ್ ನ IRS ಅಧಿಕಾರಿಯಾಗಿದ್ದು, 13 ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮುಂಬೈನ ಸೆಲೆಬ್ರೆಟಿಗಳ ಪಾಲಿಗೆ ಶನಿಯಂತೆ ಕಾಡುತ್ತಿದ್ದಾರೆ. ಈ ಹಿಂದೆ ನಟ ಸುಶಾಂತ್ ಸಿಂಗ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಪಾತ್ರದ ಕುರಿತಂತೆ ತನಿಖೆ ನಡೆಸುವ ಮೂಲಕ ಸಮೀರ್ ಸುದ್ದಿಯಾಗಿದ್ದರು. ಇದೀಗ ಶಾರೂಖ್ ಪುತ್ರ ಹಾಗೂ ಆತನ ಗ್ಯಾಂಗ್ ಬಂಧಿಸುವ ಮೂಲಕ ಸಮೀರ್ ಸುದ್ದಿಯಲ್ಲಿದ್ದಾರೆ.
ಈ ಸಮೀರ್ ಡ್ರಗ್ಸ್ ಕೇಸ್ ಮಾತ್ರವಲ್ಲ, ಅದಕ್ಕೂ ಮುನ್ನ ತಮ್ಮ ಅನೇಕ ಕಾರ್ಯವೈಖರಿ ಮೂಲಕ ಸುದ್ದಿಯಲ್ಲಿದ್ದರು.
2011ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಮರಳಿದ ವೇಳೆ, ಚಿನ್ನದ ಟ್ರೋಫಿಗೆ ವಿದೇಶಿ ಸುಂಕ ಕಟ್ಟುವ ತನಕ ಅದನ್ನು ಮುಂಬೈ ಏರ್ ಪೋರ್ಟ್ ನಿಂದ ಹೊರಗೆ ಒಯ್ಯಲು ಬಿಟ್ಟಿರಲಿಲ್ಲ. ಇನ್ನು 2013ರಲ್ಲಿ ಬಾಲಿವುಡ್ ನ ಖ್ಯಾತ ಹಾಡುಗಾರ ಮಿಖಾ ಸಿಂಗ್ ವಿದೇಶ ಹಣದೊಂದಿಗೆ ಬಂದ ಕಾರಣಕ್ಕೆ ಅವರನ್ನು ಬಂಧಿಸಿದ್ದು ಇದೇ ಸಮೀರ್ ವಾಖಂಡೆ. ಜೊತೆಗೆ ಕಂದಾಯ ಇಲಾಖೆಯಲ್ಲಿದ್ದ ಸಂದರ್ಭದಲ್ಲಿ ಅನುರಾಗ್ ಕಶ್ಯಪ್, ವಿವೇಕ್ ಒಬೆರಾಯ್, ರಾಮ್ ಗೋಪಾಲ್ ವರ್ಮಾ ಅವರ ಆಸ್ತಿ ಮೇಲೂ ಇವರು ದಾಳಿ ನಡೆಸಿದ್ದರು.
ಅದರಲ್ಲೂ ಕಸ್ಟಮ್ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ವಾಖಂಡೆ ಹೆಸರು ಕೇಳಿದ್ರೆ ಬಾಲಿವುಡ್ ನ ಸ್ಟಾರ್ ನಟರು ಬೆವರುತ್ತಿದ್ದರು. ಬಾಲಿವುಡ್ ಕವಾನಿದರು ವಿದೇಶದಿಂದ ತರುತ್ತಿದ್ದ ವಸ್ತುಗಳಿಗೆ ತೆರಿಗೆ ವಸೂಲಿ ಮಾಡದೆ ಬಿಡುತ್ತಿರಲಿಲ್ಲ. ದೇಶದಲ್ಲಿ ಜನ ಸಾಮಾನ್ಯನಿಗೊಂದು, ಸೆಲೆಬ್ರೆಟಿಗೊಂದು ಕಾನೂನು ಇಲ್ಲ. ದೇಶದಲ್ಲಿ ಇರುವುದೊಂದೇ ಕಾನೂನು ಅದು ಎಲ್ಲರಿಗೂ ಅನ್ವಯಿಸುತ್ತದೆ ಅನ್ನುವುದು ಇವರ ಮಾತು.
ಅಂದ ಹಾಗೇ ಸಮೀರ್ ವಾಖಂಡ್ ಕ್ರಾಂತಿ ರೆಡ್ಕರ್ ಅನ್ನುವ ನಟಿಯನ್ನು ವಿವಾಹವಾಗಿದ್ದಾರೆ.
Discussion about this post