ನವದೆಹಲಿ : ಅಮೆರಿಕಾ ಮತ್ತು ಭಾರತದ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಯತ್ನಿಸುತ್ತಿದ್ದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ಅವರಿಗೆ ತೀವ್ರ ಮುಖ ಭಂಗವಾಗಿದೆ.
ನಿಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ನೀವು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೆಸರನ್ನು ಬಳಸುವಂತಿಲ್ಲ ಎಂದು ಶ್ವೇತ ಭವನ ಎಚ್ಚರಿಕೆ ನೀಡಿದೆ.
ವಕೀಲೆಯಾಗಿರುವ ಮೀನಾ ಟೀ ಶರ್ಟ್ ಮತ್ತು ಸ್ವೆಟರ್ ಉತ್ಪಾದನೆಯ ಕಂಪನಿ ಹೊಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಮ್ಮ ಉತ್ಫನ್ನಗಳ ಪ್ರಚಾರ ಸಲುವಾಗಿ ಕಮಲಾ ಹೆಸರು ಬಳಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ಕಮಲಾ ಹ್ಯಾರಿಸ್ ಪಕ್ಷ, ನೀವು ಹಾಗೇ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.
ಇದಾದ ಬಳಿಕ ಇದೀಗ ಶ್ವೇತ ಭವನ ನಿಮ್ಮ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಲು ಕಮಲಾ ಹೆಸರು ಬಳಸಿಕೊಳ್ಳಬೇಡಿ ಅಂದಿದೆ.
ಈ ಹಿಂದೆ ಭಾರತದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಮೀನಾ, ರೈತ ಹೋರಾಟದ ಕುರಿತಂತೆ ಸುಳ್ಳು ಸುದ್ದಿಗಳನ್ನು ಹರಡಿದ್ದರು.
ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಮೂಲಕ, ಅಮೆರಿಕಾ ಭಾರತ ನಡುವೆ ಸಂಬಂಧ ಕೆಡಿಸುವ ಯತ್ನ ಮಾಡಿದ್ದರು. ಇದೀಗ ಶ್ವೇತ ಭವನದಿಂದ ಬಹಿರಂಗ ಎಚ್ಚರಿಕೆ ಪಡೆಯುವ ಮೂಲಕ ಅಮೆರಿಕಾ ಉಪಾಧ್ಯಕ್ಷರ ಸೊಸೆಯ ನಿಜ ಬಣ್ಣ ಬಯಲಾಗಿದೆ
Discussion about this post