ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ದೀಪಿಕಾ ದಾಸ್, ಕಿಶನ್, ಶೈನ್ ಶೆಟ್ಟಿ, ವಾಸುಕಿ ವೈಭವ್ ಮನೆಯಿಂದ ಹೊರಗೆ ಬಂದ ಮೇಲೂ ಸ್ನೇಹಿತರಾಗಿಯೇ ಉಳಿದುಕೊಂಡಿದ್ದಾರೆ.
ಬಹುತೇಕ ಎಲ್ಲರದ್ದೂ ಒಂದೇ ರೀತಿ ವೃತ್ತಿ ಜೀವನವಾಗಿರುವ ಕಾರಣ ಒಂದಲ್ಲ ಒಂದು ಪ್ರಾಜೆಕ್ಟ್ ಗಳಲ್ಲಿ ಪರಸ್ಪರ ಕೈ ಜೋಡಿಸುತ್ತಿದ್ದಾರೆ.
ಈ ನಡುವೆ ದೀಪಿಕಾ ದಾಸ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯೊಂದರಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಕಿಶನ್ ಕೂಡಾ ಕಾಣಿಸಿಕೊಂಡಿದ್ದಾರೆ.
ವಿಡಿಯೋ ನೋಡಿದ ಅನೇಕರು ಜೋಡಿಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಇನ್ನು ಕೆಲವು ಶೈನ್ ಶೆಟ್ಟಿಯನ್ನು ಮಿಸ್ ಮಾಡಿಕೊಂಡಿದ್ದಾರೆ.
ಅದಕ್ಕೆ ಕಾರಣವೂ ಇದೆ. ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಸಂಬಂಧ ಹೇಗಿತ್ತೋ ಗೊತ್ತಿಲ್ಲ, ವೀಕ್ಷಕ ಮಹಾಶಯರಂತು ಅಣ್ಣ ಅತ್ತಿಗೆ ಎಂದೇ ಕರೆಯುತ್ತಿದ್ದರು.
Discussion about this post