Saturday, May 15, 2021
spot_img

ದೀದಿಗಿರಿ ಮುಂದೆ ನಡೆಯಲಿಲ್ಲ ದಾದಾಗಿರಿ : ಚುನಾವಣೆ ಗೆಲ್ಲುವುದೇ ಮೋದಿ ಕಾಯಕ : ಕೊರೋನಾ ಗೆಲ್ಲುವುದಲ್ಲ

Must read

- Advertisement -
- Advertisement -

ಇಡೀ ಕೇಂದ್ರ ಸಂಪುಟವನ್ನೇ ಕರೆದುಕೊಂಡು ಪಶ್ಚಿಮ ಬಂಗಾಳ ಗೆಲ್ಲಲು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಸೋತಿದ್ದಾರೆ.. ದೀದಿ ಓ ದೀದಿ ಎಂದು ಚುನಾವಣಾ ಸಮಾವೇಶದಲ್ಲಿ ವ್ಯಂಗ್ಯವಾಡಿದ್ದ ಮೋದಿ ಅವರಿಗೆ ತೀವ್ರ ಮುಖಭಂಗವಾಗಿದೆ.. ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ಆದ್ರೆ ಬಂಗಾಳ ಗೆಲ್ಲಲು ಹೋಗಿ ಮೋದಿ ಅವರು ತೆತ್ತ ಬೆಲೆ ರಣಭಯಂಕರವಾಗಿದೆ.. ಕೊರೋನಾ ಅಬ್ಬರಿಸುತ್ತಿರೋ ಸಂದರ್ಭದಲ್ಲಿ ಲಕ್ಷಾಂತ್ರ ಜನ್ರನ್ನ ಸೇರಿಸಿ ಕೋವಿಡ್ ಸೋಂಕು ಹೆಚ್ಚಾಗಲು ಕಾರಣಕರ್ತರಾಗಿದ್ದಾರೆ.. ಫೆಬ್ರುವರಿಯಲ್ಲಿ ತಜ್ಞರು ಎಚ್ಚರಿಸಿದ್ದರೂ ಕೊರೋನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳದ ಮೋದಿ, ಚುನಾವಣಾ ಯಾಗ ಕೈಗೊಂಡಿದ್ದು ಅಕ್ಷಮ್ಯ ಅಪರಾಧ. ಇವತ್ತು ಬಂಗಾಳದಲ್ಲಿ ಬಿಜೆಪಿ ಶಾಸಕರು ಗೆದ್ದು ಬೀಗಿರಬಹುದು.. ಮತ್ತೊಂದೆಡೆ ಲಕ್ಷಾಂತರ ಜನ ಸಾವು- ನೋವಿಗೆ ಗುರಿಯಾಗಬೇಕಾಯಿತು. ಮೋದಿ ಕೇವಲ ಚುನಾವಣೆಗಳನ್ನು ಗೆಲ್ಲುವತ್ತಾ ಗಮನ ಹರಿಸಿದ್ರೆ ಹೊರತು ಭಾರತವನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಲು ಮುಂದಾಗಲಿಲ್ಲ ಎನ್ನುವುದು ಸತ್ಯ. ಮೋದಿ ಕೇವಲ ಚುನಾವಣಾ ಚಾಣಕ್ಯರಾಗಿ ಒಂದರ ಮೇಲೊಂದು ಚುನಾವಣೆ ಗೆದ್ದರೆ ಹೊರತು ದೆಹಲಿಯಲ್ಲಿ ಕುಳಿತು ಆಡಳಿತ ನಡೆಸಲಿಲ್ಲ.. ಚುನಾವಣೆಗಳನ್ನು ಗೆಲ್ಲುವುದೇ ಮೋದಿ ಅವರ ಕಾಯಕವಾಯ್ತು.. ಒಂದರ ಮೇಲೆ ಒಂದರಂತೆ ಚುನಾವಣೆಗಳನ್ನು ಗೆದ್ದು ಬೀಗಬೇಕೆಂಬ ಹಂಬಲದಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ.. ಒಬ್ಬ ನೇತಾರ ಒಮ್ಮೆ ಅಧಿಕಾರಕ್ಕೆ ಬಂದ್ರೆ ಆತ ಜನರ ಒಳಿತಿಗಾಗಿ ಕೆಲಸ ಮಾಡಬೇಕೆ ಹೊರತು ಮುಂದಿನ ಚುನಾವಣೆ ದೃಷ್ಟಿಯಿಂದ ಅಲ್ಲ.. ಸಾಮ್ರಾಜ್ಯ ವಿಸ್ತರಿಸುವ ದಾವಂತದಲ್ಲಿ ಮೋದಿ ಅವರು ಭಾರೀ ಬೆಲೆ ತೆತ್ತಿದ್ದಾರೆ..ಮೋದಿ ಚುನಾವಣೆ ಗೆಲ್ಲಲು ಜನರು ಆಸ್ಪತ್ರೆ ಮುಂದೆ ಕ್ಯೂ ನಿಲ್ಲಬೇಕಾಯ್ತು.. ಆಕ್ಸಿಜನ್ ಪಡೆಯಲು ಕ್ಯೂ… ಕೋವಿಡ್ ಟೆಸ್ಟ್ ಮಾಡಿಸಲು ಕ್ಯೂ.. ಬೆಡ್ ಗಾಗಿ ಕ್ಯೂ… ವ್ಯಾಕ್ಸಿನ್ ಕೇಂದ್ರಗಳಲ್ಲಿ ಜನರು ಕ್ಯೂ ನಿಂತು ಪರದಾಡಬೇಕಾಯ್ತು.. ನೋಟು ಅಮಾನ್ಯ ಮಾಡಿದ ದಿನಗಳಲ್ಲಿ ಜನರು ಕಂಗಾಲಾಗಿ ಎಟಿಎಂ ಮುಂದೆ ನಿಂತ ದೃಶ್ಯಗಳನ್ನು ಮತ್ತೆ ನೆನಪಿಸಿತು..ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೂರು ಸಂದೇಶಗಳನ್ನು ನೀಡಿದೆ.. 1. ಮೋದಿ ಎಷ್ಟೇ ಜನಪ್ರಿಯ ಆದ್ರೂ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಇಲ್ಲ ಅಂತಾ ಪಶ್ಚಿಮ ಬಂಗಾಳ ರಿಸಲ್ಟ್ ನಿಂದ ಸ್ಪಷ್ಟವಾಗಿದೆ. ಮೋದಿ ಅವರನ್ನ ಇಷ್ಟ ಪಡ್ತೀವಿ ಅಂದ ಮಾತ್ರಕ್ಕೆ ಎಲ್ಲೆಡೆ ಮೋದಿ ಅವರೇ ಗೆಲ್ಲಬೇಕೆಂಬ ಧೋರಣೆ ಒಪ್ಪಲು ಸಾಧ್ಯವಿಲ್ಲ ಎನ್ನುವುದು ಜನರ ತೀರ್ಪು.2. ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಆಡಳಿತ ಯಂತ್ರಗಳನ್ನು ದುರುಪಯೋಗ ಪಡಿಸಕೊಂಡ್ರು ಚುನಾವಣ ಗೆಲ್ಲುವುದು ಕಠಿಣ ಅನ್ನೋದನ್ನ ಸಾರಿ ಹೇಳಿದೆ ಈ ಫಲಿತಾಂಶ. ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸಂದರ್ಭದಲ್ಲಿ ಅನಗತ್ಯವಾಗಿ 8 ಹಂತದ ಚುನಾವಣೆ ಮಾಡಿ ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡಲು ಯತ್ನಿಸಿದ್ರೂ ಜನರ ನಿರ್ಧಾರ ಮಾತ್ರ ಬದಲಾಗಿಲ್ಲ.. ಎಷ್ಟೇ ಹಂತದ ಚುನಾವಣೆ ನಡೆದ್ರೂ ಜನರ ತೀರ್ಮಾನ ಮೊದಲೇ ನಿರ್ಧಾರವಾಗಿರುತ್ತೆ ಅನ್ನೋದಕ್ಕೆ ಈ ಚುನಾವಣಾ ಫಲಿತಾಂಶ ಸಾಕ್ಷಿ.3. ಹಣ ಬಲ, ತೋಳ್ಬಲ, ಅಧಿಕಾರ ದುರುಪಯೋಗ ಪ್ರತಿ ಬಾರಿ ಫಲ ನೀಡುವುದಿಲ್ಲ.. ಜನ ಬಲದ ಮುಂದೆ ಯಾವುದೂ ಇಲ್ಲ ಅನ್ನೋದನ್ನ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು..ಸದ್ಯ ದೇಶದ ಯಾವುದೇ ಭಾಗದಲ್ಲೂ ಚುನಾವಣೆ ಇಲ್ಲ… ಕೊನೆ ಪಕ್ಷ ಈಗಾಲಾದ್ರೂ ಕೇಂದ್ರದಿಂದ ಆಡಳಿತ ನಿರೀಕ್ಷೆ ಮಾಡಬಹುದೇನೋ.. ಇಲ್ಲ ಅಂದ್ರೆ ಈಗ ಆಸ್ಪತ್ರೆ ಮುಂದೆ ನಿಂತಿರೋ ಜನರು 2024ರಲ್ಲಿ ವೋಟ್ ಮಾಡಲು ಕ್ಯೂ ನಿಂತಾಗ ನಿಮ್ಮ ಹಣೆಬರಹ ಬದಲಿಸ್ತಾರೆ.. ಎಚ್ಚರಿಕೆ ಇರಲಿ. ಒಬ್ಬ ಅಪ್ಪ.. ಮಗ… ತಾಯಿ… ಮಗಳು…ಅಣ್ಣ.. ತಮ್ಮ.. ಅಜ್ಜ-ಅಜ್ಜಿ ಹೀಗೆ ತಮ್ಮವರನ್ನು ಕಳೆದುಕೊಂಡಿರುವ ಜನರ ಕಿಚ್ಚು ನಿಮ್ಮನ್ನು ಸುಡದೇ ಇರುವುದಿಲ್ಲ…

ಈ ಲೇಖನವನ್ನು ಪ್ರಜಾ ಟಿವಿಯ ಮಾಜಿ ಮುಖ್ಯಸ್ಥರಾದ ರಾಚಪ್ಪ ಮನೋಜ್ ಅವರ ಫೇಸ್ ಬುಕ್ ಪುಟದಿಂದ ಪಡೆಯಲಾಗಿದೆ.

- Advertisement -
- Advertisement -spot_img
- Advertisement -spot_img

Latest article