ಮಾನವನ ದೇಹ ಶೇ.70ರಷ್ಟು ಭಾಗವು ನೀರಿನಿಂದ ರಚಿಸಲ್ಪಟ್ಟಿದೆ. ಆಹಾರವಿಲ್ಲದೆ ಮೂರು ವಾರಗಳ ಕಾಲ ಬದುಕಿರಬಹುದು, ಅದರೆ ನೀರು ಸೇವಿಸದೆ ಒಂದು ವಾರ ಬದುಕಬಹುದು.
ಕೆಲವರು ಪ್ರತಿದಿನ ಸಾಕಷ್ಟು ನೀರನ್ನು ಕುಡಿಯೋದಿಲ್ಲ. ಇಂತಹವರಲ್ಲಿ ನಿರ್ಜಲೀಕರಣದ ಲಕ್ಷಣ ಕಾಣಿಸಿಕೊಳ್ಳಬಹುದು. ಹಾಗಾದ್ರೆ ನಿರ್ಜಲಿಕರಣದ ಲಕ್ಷಣಗಳೇನು
1
ಬಾಯಾರಿಕೆಯಾಗೋದು ನಿರ್ಜಲೀಕರಣದ ಮೊದಲ ಸಂಕೇತ. ಹೀಗಾಗಿ ನೀರು ಕುಡಿಯಬೇಕು ಅನ್ನಿಸಿದಾಗ ಸ್ವಲ್ಪ ನೀರು ಕುಡಿಯಲೇಬೇಕು.
1
ಬಾಯಾರಿಕೆಯಾದಾಗ ನೀರು ಕುಡಿಯದಿದ್ದರೆ ಏನನ್ನಾದರೂ ತಿನ್ನಬೇಕು ಅನ್ನೋ ಅತೀವ ತುಡಿತ ಶುರುವಾಗುತ್ತದೆ.
2
ಬಾಯಿಯ ಒಳಭಾಗವು ಒಣಗಿದ್ದರೆ ಮತ್ತು ನಾಲಿಗೆಯು ದೊರಗುದೊರಗಾಗಿದ್ದರೆ ತೀವ್ರ ನಿರ್ಜಲೀಕರಣಕ್ಕೆ ತುತ್ತಾಗುವ ಸಾಧ್ಯತೆಗಳಿದೆ ಎಂದರ್ಥ.
2
ಹೀಗೆ ಅನುಭವವಾದಗ, ತಕ್ಷಣ ಸ್ವಲ್ಪ ಹೆಚ್ಚು ನೀರು ಸೇವಿಸಬೇಕು
3
ನಿರ್ಜಲೀಕರಣ ಮಿದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತೀವ ದಣಿವನ್ನು ಇದು ಸೃಷ್ಟಿಸಿ ದಿಢೀರ್ ನಿದ್ರೆಗೆ ಶರಣಾಗುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ನಿದ್ರಿಸೋ ಬದಲಾಗಿ ಸ್ವಲ್ಪ ನೀರನ್ನು ಕುಡಿಯಬೇಕು.
4
ಚಿತ್ತ ವಿಭ್ರಮೆ ತೀವ್ರ ನಿರ್ಜಲೀಕರಣದ ಲಕ್ಷಣವಾಗಿದೆ. ಹಗಲು ಹೊತ್ತಿನಲ್ಲೇ ಭ್ರಮೆಗಳು ಕಾಡತೊಡಗುತ್ತಿವೆ ಅಂದ್ರೆ ತಕ್ಷಣ ನೀರು ಕುಡಿಯಿರಿ. ಕಾರಣವಿಲ್ಲದೆ ಗೊಣಗುವುದು ಕೂಡಾ ನಿರ್ಜಲೀಕರಣದ ಲಕ್ಷಣವಂತೆ
5
ತಲೆ ಸಿಡಿದುಹೋಗುತ್ತದೆ ಅನ್ನೋ ತಲೆನೋವು ಅದು ನಿರ್ಜಲೀಕರಣದ ಸಾಮಾನ್ಯ ಲಕ್ಷಣವಾಗಿದೆ. ಕೆಲವೊಮ್ಮೆ ಇದು ಅತಿಯಾದ ಜಲೀಕರಣದ ಸಂಕೇತವೂ ಆಗಿರುತ್ತದೆ.
5
ಹೀಗಾಗಿ ಕೆಲವು ಗಂಟೆಗಳ ಹಿಂದೆ ನೀರು ಕುಡಿದಿದ್ದು ಎಷ್ಟು ಅನ್ನುವುದು ಗೊತ್ತಿದ್ರೆ ಗೊಂದಲಗಳು ಕಾಡೋದಿಲ್ಲ.
6
ಸ್ನಾಯು ಸೆಳೆತ ನಿರ್ಜಲೀಕರಣದ ಇನ್ನೊಂದು ಸಂಕೇತ. ತೀವ್ರ ಶ್ರಮದ ಕೆಲಸದ ನಂತರ ಸ್ನಾಯು ಸೆಳೆತ ಸಹಜ.
6
ಆದರೆ ಯಾವುದೇ ದೈಹಿಕ ಶ್ರಮವಿಲ್ಲದೆ ಹೋದರೂ ಕೆಲವೊಮ್ಮೆ ಸ್ನಾಯು ಸೆಳೆತವಾಗುತ್ತಿರುತ್ತದೆ.
7
ದೈಹಿಕ ಶ್ರಮದ ನಡುವೆ ಬೆವರುವಿಕೆ ನಿಂತುಹೋದರೆ ಅದು ತೀವ್ರ ನಿರ್ಜಲೀಕರಣದ ಸಂಕೇತ. ಈ ಸಂದರ್ಭದಲ್ಲಿ ಆದಷ್ಟು ನೀರು ಸೇವನೆ ಉತ್ತಮ
8
ನೀವು ಮೂತ್ರ ವಿಸರ್ಜಿಸುವಾಗ ನೋವಿನ ಅನುಭವವಾಗುತ್ತಿದ್ದರೆ ಮತ್ತು ಮೂತ್ರದ ಬಣ್ಣವು ಕಡುಹಳದಿಯಾಗಿದ್ದರೆ ಇದು ತೀವ್ರ ನಿರ್ಜಲೀಕರಣದ ಸಂಕೇತ.
8
ತಕ್ಷಣ ನೀರನ್ನು ಸೇವಿಸೋ ತುರ್ತು ಅಗತ್ಯ. ಅತಿಯಾದ ನಿರ್ಜಲೀಕರಣ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು
9
ಚರ್ಮವು ಮೃದುತನ ಮತ್ತು ಹೊಳಪನ್ನು ಕಳೆದುಕೊಂಡು ಸುಕ್ಕುಗಟ್ಟಿ, ಒಣಗಿದಂತೆ ಕಾಣಿಸಿಕೊಂಡರೆ ನಿರ್ಜಲೀಕರಣಕ್ಕೆ ತುತ್ತಾಗಿದ್ದೀರಿ ಎಂದೇ ಅರ್ಥ.
9
ದಿಢೀರ್ ಆಗಿ ಹತ್ತಿರ ಅಥವಾ ದೂರದ ವಸ್ತುಗಳು ಮಸುಕಾಗಿ ಕಾಣಿಸಿಕೊಂಡರೆ ಅದು ನಿರ್ಜಲೀಕರಣದ ಒಂದು ಲಕ್ಷಣವಾಗಿದೆ. ದೃಷ್ಟಿ ಮಸುಕಾಗಲು ಹತ್ತು ಹಲವಾರು ಕಾರಣಗಳಿವೆ ಅನ್ನೋದನ್ನ ಮರೆಯಬೇಡಿ.