Saturday, May 15, 2021
spot_img

ಕೊರೋನಾ ಮುಕ್ತರಾದ ಮದರಂಗಿ ದಂಪತಿ : ಸೋಂಕು ಸೋಲಿಸಲು ಟಿಪ್ಸ್ ಕೊಟ್ಟ ಕೃಷ್ಣಾ

Must read

- Advertisement -
- Advertisement -

ಬೆಂಗಳೂರು : ಮದುವೆ ಸಂಭ್ರಮ ಮುಗಿಸಿ ದಾಂಪತ್ಯ ಜೀವನವನ್ನು ಎಂಜಾಯ್ ಮಾಡೋಣ ಅನ್ನುವಷ್ಟರಲ್ಲಿ ಡಾರ್ಲಿಂಗ್ ಕೃಷ್ಣ ದಂಪತಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಗೋವಾ ಪ್ರವಾಸ ಮುಗಿಸಿ ಹಿಂತಿರುಗಿ ಬರುವಷ್ಟರಲ್ಲಿ ಕೃಷ್ಣ ಮತ್ತು ಮಿಲನಾ ಪಾಸಿಟಿವ್ ಎಂದು ಗೊತ್ತಾಗಿತ್ತು.

ಹೀಗಾಗಿ ವೈದ್ಯರ ಸಲಹೆಯಂತೆ ಮನೆಯನ್ನೇ ಕ್ವಾರಂಟೈನ್ ಆಗಿದ್ದ ಇಬ್ಬರೂ, ಮನೆಯಲ್ಲೇ ಕೊರೋನಾ ಸೋಲಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು. ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೇ ಮಿಲನಾ ನಾಗರಾಜ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು.

ಇದೀಗ ಕೃಷ್ಣಾ ಹಾಗೂ ಮಿಲನ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಇತ್ತೀಚೆಗೆ ಬಂದಿರುವ ಲ್ಯಾಬ್ ರಿಪೋರ್ಟ್ ಅವರ ಮುಖದಲ್ಲಿ ಕಿರುನಗೆಯನ್ನು ಮೂಡಿಸಿದೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಾವು ಕೊರೋನಾ ಮುಕ್ತರಾಗಿರುವುದನ್ನು ಹಂಚಿಕೊಂಡಿರುವ ಮಿಲನಾ ಹಾಗೂ ಕೃಷ್ಣಾ ತಾವು ಕೊರೋನಾ ಗೆದ್ದಿದ್ದು ಹೇಗೆ ಅನ್ನುವುದನ್ನು ವಿವರಿಸಿದ್ದಾರೆ.

ಮೂರು ದಿನಗಳ ಕಾಲ ತಲೆನೋವು ಹಾಗೂ ಜ್ವರ ಕಾಡಿತ್ತು ಬಳಿಕ ಎಲ್ಲವೂ ನಾರ್ಮಲ್ ಆಗ್ತಾ ಬಂತು ಅಂದಿದ್ದಾರೆ.

- Advertisement -
- Advertisement -spot_img
- Advertisement -spot_img

Latest article