ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡುವುದಾಗಿ ಹೇಳಿದ್ದ ಬಿಜೆಪಿ ಇದೀಗ ನುಡಿದಂತೆ ನಡೆದಿದೆ. ಅಲ್ಪಸಂಖ್ಯಾತ ಸಮುದಾಯ ಒಲೈಕೆ ಸಲುವಾಗಿ ಪ್ರಾರಂಭಿಸಿದ್ದ ಟಿಪ್ಪು ಜಯಂತಿ ಆಚರಣೆಗೆ ಯಡಿಯೂರಪ್ಪ ಸರ್ಕಾರ ಬ್ರೇಕ್ ಹಾಕಿದೆ.
ಸರ್ಕಾರ ರದ್ದು ಪಡಿಸಿದರೂ ಪಕ್ಷದ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸ್ತಾರಂತೆ ದೇವೇಗೌಡರು 1
ಆದರೆ ಈ ನಿರ್ಧಾರ ಮೈತ್ರಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೊಂದು ದ್ವೇಷದ ರಾಜಕಾರಣ ಅನ್ನುವ ಟೀಕೆಯನ್ನು ಅವರು ಮಾಡಿದ್ದಾರೆ.
ಸರ್ಕಾರದ ತೀರ್ಮಾನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟಿಪ್ಪು ಜಯಂತಿಯನ್ನು ಬಿಜೆಪಿ ರದ್ದು ಮಾಡಿದ್ದು, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.
ಸರ್ಕಾರ ರದ್ದು ಪಡಿಸಿದರೂ ಪಕ್ಷದ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸ್ತಾರಂತೆ ದೇವೇಗೌಡರು 2
ನಾವು ಟಿಪ್ಪು ಜಯಂತಿಯನ್ನು ಹಳೆಯ ಜೆಡಿಎಸ್ ಕಚೇರಿಯಲ್ಲಿದ್ದಾಗಿನಿಂದಲೂ ಆಚರಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಅಧ್ಯಕ್ಷರಾಗಿದ್ದಾಗಲೂ ಆಚರಣೆ ಮಾಡಿದ್ದೇವೆ. ರಾಜಕೀಯಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದು. ನಾನು ಮುಖ್ಯಮಂತ್ರಿಯಗಿದ್ದಾಗ ಮತೀಯ ಅಲ್ಪ ಸಂಖ್ಯಾತರಿಗೆ 5 ರೆಶಿಡೆನ್ಸಿಯಲ್ ಶಾಲೆ ಪ್ರಾರಂಭಿಸಿ ಟಿಪ್ಪು ಹೆಸರನ್ನೇ ಇಟ್ಟಿದ್ದೆ. ಹೀಗಾಗಿ ಇನ್ನು ಮುಂದೆಯೂ ಸಹ ನಮ್ಮ ಜೆಡಿಎಸ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.
Discussion about this post