ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಪ್ ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಮತ್ತೊಬ್ಬ ಆಟಗಾರನಿಗೆ ಅವರು ಢಿಕ್ಕಿ ಹೊಡೆದು ಗಾಯಗೊಂಡಿದ್ದರು.
ಪೇಶಾವರ ಝಲ್ಮಿ ವಿರುದ್ಧ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುವಾಗ ಫೀಲ್ಡಿಂಗ್ ವೇಳೆ ಎಫ್ ಡು ಪ್ಲೆಸಿಸ್ ಸಹ ಆಟಗಾರ ಮುಹಮ್ಮದ್ ಹಸ್ನೈನ್ ಗೆ ಢಿಕ್ಕಿ ಹೊಡೆದಿದ್ದಾರೆ. 7ನೇ ಓವರ್ ವೇಳೆ ಬೌಂಡರಿ ತಡೆಯಲು ಫಾಪ್ ಡೈವ್ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಎದುರು ಬಂದ ಪಾಕಿಸ್ತಾನ ಕ್ರಿಕೆಟಿಗ ಮುಹಮ್ಮದ್ ಹಸ್ನೈನ್ ಗೆ ಡಿಕ್ಕಿ ಹೊಡೆದರು. ಆಗ ಪ್ಲೆಸಿಸ್ ತಲೆ ಹಸ್ನೈನ್ ಅವರ ಕಾಲುಗಂಟಿಗೆ ಬಡಿದುದಕ್ಷಿಣ ಆಫ್ರಿಕಾ ಕ್ರಿಕೆಟಿಗ ನೆಲಕ್ಕೆ ಉರುಳಿದ್ದಾರೆ..
ಪಾಕ್ ಮಾಧ್ಯಮಗಳ ವರದಿ ಪ್ರಕಾರ ಪ್ಲೆಸಿಸ್ ಅವರನ್ನು ಅಬುಧಾಬಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Discussion about this post