ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಕಾರಣವಿಲ್ಲದೆ ಪಾಕಿಗಳು ಕೆರೆದುಕೊಳ್ಳಲಾರಂಭಿಸಿದ್ದಾರೆ.
ಇದೊಂದು ಭಾರತದ ಆಂತರಿಕ ವಿಚಾರವಾಗಿದ್ದರೂ ಕೆಲ ಪಾಕಿಗಳು ವಿಕೃತಿ ಮೆರೆಯಲಾರಂಭಿಸಿದ್ದಾರೆ.
ಈಗ ಪಾಕ್ ಪ್ರಧಾನಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕಿಕೊಂಡಿದ್ದರೂ ಮತ್ತೆ ಮತ್ತೆ ತಮ್ಮ ದೇಶದ ಮಾನವನ್ನು ಪಾಕಿಗಳೇ ಹರಾಜು ಹಾಕಲಾರಂಬಿಸಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಗ್ಲೋಬಲ್ ಸಿಟಿಜನ್ ಫೋರಂ ನಿಯೋಗದೊಂದಿಗೆ ಯುನೈಟೆಡ್ ಫೀಸ್ ಫೆಡರೇಶನ್ ಸಮ್ಮೇಳನದಲ್ಲಿ ಭಾಗವಹಿಸಲು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ತೆರಳಿದ್ದರು. ಈ ವೇಳೆ ಸಮ್ಮೇಳನ ಮುಗಿಸಿಕೊಂಡು ಭಾರತದ ರಾಯಭಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕೆಲ ಪಾಕಿಗಳು ಶಾಜಿಯಾ ಹಾಗೂ ಇತರ ಭಾರತೀಯರನ್ನು ಸುತ್ತುವರೆದರು.
ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಆಗ ಅಲ್ಲಿಗೆ ಎಂಟ್ರಿ ಕೊಟ್ಟ ಶಾಜಿಯಾ ಇಲ್ಮಿ ಮೋದಿ ವಿರುದ್ಧ ಘೋಷಣೆ ಕೂಗದಂತೆ ಧಮ್ಕಿ ಎಚ್ಚರಿಕೆ ಕೊಟ್ಟಿದ್ದು ಮಾತ್ರವಲ್ಲದೆ ಇಂಡಿಯಾ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಭಾರತೀಯರು ಕೂಡಾ ಇದಕ್ಕೆ ದನಿಗೂಡಿಸಿದರು.
ಇದೇ ವೇಳೆ ಪಾಕಿಗಳನ್ನು ತರಾಟೆಗೆ ತೆಗೆದುಕೊಂಡ ಶಾಜಿಯಾ, ಮತ್ತೊಂದು ದೇಶದ ನೆಲದಲ್ಲಿ ನಿಂತು ಇನ್ನೊಂದು ದೇಶ ಹಾಗೂ ಅದರ ಮುಖ್ಯಸ್ಥರ ವಿರುದ್ಧ ಘೋಷಣೆ ಕೂಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಒಂಟಿ ಹೆಣ್ಣು ಮಗಳೊಬ್ಬಳು ಪಾಪಿ ಪಾಕಿಗಳ ಎದುರು ಇಂಡಿಯಾ ಜಿಂದಾಬಾದ್ ಎಂದು ಕೂಗಿರುವುದು ಗ್ರೇಟ್ ಅಂದ್ರೆ ತಪ್ಪಗಲಾರದರು.
ಆದರೆ ದುರಂತ ಅದಲ್ಲ, ಹಿಂದೊಮ್ಮೆ ನಮ್ಮ ನಟಿ ಮಣಿಯೊಬ್ಬರಿಗೆ ಪಾಕಿಸ್ತಾನ ಸ್ವರ್ಗದಂತೆ ಕಾಣಿಸಿತ್ತು.
Discussion about this post