ಬೆಂಗಳೂರು : 25 ವರ್ಷಗಳ ಕಾಲ ನಿರಂತರವಾಗಿ ಕ್ರಿಕೆಟ್ ಆಡಿದ ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ವಿದಾಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ಅವರು ತಮ್ಮ ನಿವೃತ್ತಿಯನ್ನು ದೃಢಪಡಿಸಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಎಂ.ಎಸ್.ಧೋನಿ, ವಿರಾಟ್ ಕೊಹ್ಲಿಯಂತ ಆಟಗಾರರ ಜೊತೆ ಆಡಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಅಂದಿದ್ದಾರೆ.
2004ರಲ್ಲಿ ಪ್ರಥಮ್ ದರ್ಜೆ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದ ವಿನಯ್ 2010ರಲ್ಲಿ ಭಾರತ ತಂಡ ಪ್ರವೇಶಿಸಿದ್ದರು.
ಒಟ್ಟು 31 ಏಕ ದಿನ, 9 ಟಿ20, 1 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿನಯ್ ಏಕದಿನದಲ್ಲಿ 38, ಟಿ20ಯಲ್ಲಿ 10 ಹಾಗೂ ಟೆಸ್ಟ್ ನಲ್ಲಿ 1 ವಿಕೆಟ್ ಗಳಿಸಿದ್ದಾರೆ.
ಇನ್ನು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 504 ವಿಕೆಟ್ ಪಡೆದಿರುವ ವಿನಯ್. ರಣಜಿ ಇತಿಹಾಸದಲ್ಲೇ ಗರಿಷ್ಟ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿನಯ್ 442 ವಿಕೆಟ್ ಗಳನ್ನು ರಣಜಿ ಟ್ರೋಫಿಯಲ್ಲೇ ಪಡೆದಿದ್ದಾರೆ.
2013-14, 2014-15 ರಲ್ಲಿ ವಿನಯ್ ನಾಯಕತ್ವದಲ್ಲಿ ಸತತವಾಗಿ ಟೀಂ ಕರ್ನಾಟಕ ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಪಿಯನ್ನು ಗೆದ್ದುಕೊಂಡಿತ್ತು.
2019ರಲ್ಲಿ ಕರ್ನಾಟಕ ತಂಡ ತೊರೆದ ವಿನಯ್ ಪುದುಚೇರಿ ಪರ ಒಂದು ವರ್ಷ ಆಡಿದ್ದರು.

Discussion about this post