ಮದ್ಯದ ದೊರೆ ವಿಜಯ್ ಮಲ್ಯ ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ವಂಚನೆ ಮಾಡಿ ಲಂಡನ್ ಗೆ ಪರಾರಿಯಾಗಿದ್ದಾರೆ. ಕೋಟಿ ಕೋಟಿ ಸಾಲ ತಲೆ ಮೇಲೆ ಇದ್ದರೂ ಅದನ್ನು ತುಂಬುವ ಗೋಜಿಗೆ ಹೋಗದ ಮಲ್ಯ ಐಷರಾಮಿ ಜೀವನವನ್ನು ಅಲ್ಲೇ ಸಾಗಿಸುತ್ತಿದ್ದಾರೆ.
ಭಾರತದಲ್ಲಿದ್ದ ವೇಳೆ ಫಾರ್ಮೂಲ ಓನ್, ಕ್ರಿಕೆಟ್ ಟೀಂ, ಪುಟ್ಬಾಲ್ ಟೀಂ ಎಂದೆಲ್ಲಾ ದುಡಿದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ. ಇದರೊಂದಿಗೆ ಮಹಾತ್ಮ ಗಾಂಧಿ ಕನ್ನಡಕ, ಟಿಪ್ಪು ಕತ್ತಿಯನ್ನು ಖರೀದಿಸಿ ಸಾಕಷ್ಟು ಸುದ್ದಿ ಕೂಡಾ ಮಾಡಿದ್ದ ಮಲ್ಯ, ನಾನೆಷ್ಟು ಸಿರಿವಂತ ಅನ್ನುವುದನ್ನು ಜಗತ್ತಿಗೆ ಸಾರಿದ್ದರು.
ಆದರೆ ಮಲ್ಯನ ಮನೆಯಲ್ಲಿ ಈಗ್ಲೂ ಚಿನ್ನದ ಟಾಯ್ಲೆಟ್ ಇದೆ ಅಂದ್ರೆ ನಂಬ್ತೀರಾ..ನಂಬಲೇಬೇಕು.ಯಾಕಂದ್ರೆ ಇದನ್ನು ಕಣ್ಣಾರೆ ಕಂಡವರು ವಿಷಯ ಬಹಿರಂಗಪಡಿಸಿದ್ದಾರೆ.
ಲಂಡನ್ ನಲ್ಲಿರುವ ಅವರ ವೈಭವೋಪೇತ ಮನೆಯಲ್ಲಿ ಚಿನ್ನದ ಕಮೋಡ್ ಇಟ್ಟುಕೊಂಡಿದ್ದಾರೆ ಅನ್ನುವ ವಿಷಯವನ್ನು ಅಂಗ್ಲಲೇಖಕ ಜೇಜ್ಸ್ ಕ್ರ್ಯಾಬ್ ಟ್ರೀ ಬಹಿರಂಗಪಡಿಸಿದ್ದಾರೆ.
ಮುಂಬೈನ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು ಒಮ್ಮೆ ನಾನು ಲಂಡನ್ ನಲ್ಲಿರುವ ಮನೆಗೆ ಅವರ ಆಹ್ವಾನದ ಮೇರೆ ಹೋಗಿದ್ದೆ. ಆಗ ಚಿನ್ನದ ಟಾಯ್ಲೆಟ್ ಕಂಡಿದ್ದೇನೆ ಎಂದಿದ್ದಾರೆ.
ಕೋಟಿ ಕೋಟಿ ತಿಂದು ತೇಗಿರುವ ಮಲ್ಯ ಚಿನ್ನದ ಕಮೋಡ್ ಮೇಲೆ ಕೂತು ಅದೇನು ಕಕ್ಕುತ್ತಾನೋ..